ಚಂದಮಾಮ ಮುಗಿಲಾಗ – Chandamaama Mugilaaga Song Lyrics in Kannada

PK-Music

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

ಓಓಓಓಓಓಓಓ

ಆಆಆಆಆಆಆಆ

ಓಓಓಓಓಓಓಓ

ಆಆಆಆಆಆಆಆ

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

ಪ್ರೀತಿ ಮಮತೆ ಕಡಲಾಗ

ಬೆಳೆದು ಬಂದೆ ಸುಮದಂಗೆ

ಪ್ರೀತಿ ಮಮತೆ ಕಡಲಾಗ

ಬೆಳೆದು ಬಂದೆ ಸುಮದಂಗೆ

ಜಗವ ತೋರೋ ತಾಯಿಗೆ

ಸಾಟಿ ಇಲ್ಲ ಜಗದಾಗೆ

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

♬♬♬♬♬♬♬♬♬♬♬♬

ನವಮಾಸದ ವನವಾಸ

ಮಾಡಿ ಎಷ್ಟೋ ಉಪವಾಸ

ನವಮಾಸದ ವನವಾಸ

ಮಾಡಿ ಎಷ್ಟೋ ಉಪವಾಸ

ಹರಕೆ ಹೊತ್ತು ದೇವರಿಗೆ

ಹೆತ್ತಳೆನ್ನ ಹಡೆದವ್ವ

ಎದೆ ಹಾಲಿನ ಅಮೃತವ

ಉಣಿಸಿ ಬೆಳೆಸಿದಳು ಜೀವ

ಮರೆತಳೆಲ್ಲ ನೋವ

ನೋಡಿ ನನ್ನ ನಗುವ

ಜೀವವೆಲ್ಲ ನನಗಾಗಿ

ಭಾವ ಜೋಗುಳಕ್ಕಾಗಿ

ಜೀವವೆಲ್ಲ ನನಗಾಗಿ

ಭಾವ ಜೋಗುಳಕ್ಕಾಗಿ

ಮುಗಿಲಿನಂತ ಮನದಿಂದ

ಹಗಲು ಇರುಳು ಸಲುಹಿದಳು

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

♬♬♬♬♬♬♬♬♬♬♬♬

ನೂರು ಕಷ್ಟ ಇದ್ದರೂ ತಾ

ನನ್ನಿಷ್ಟ ಪೂರೈಸುವಳು

ನೂರು ಕಷ್ಟ ಇದ್ದರೂ ತಾ

ನನ್ನಿಷ್ಟ ಪೂರೈಸುವಳು

ನೂರು ತಪ್ಪು ಮಾಡಿದರು

ಪ್ರೀತಿಯಿಂದ ಸಾಕುವಳು

ಒಂದು ಕ್ಷಣವು ಮರೆಯಾದರೂ ನಾ

ಸುತ್ತಿ ಸುಳಿದು ತೂಗುಗಳು

ಓಡಿಬಂದು ಅಪ್ಪಲು ನಾ

ಹಾಡಿ ಹಾಡಿ ನಲಿಯುವಳು

ತೊದಲು ನುಡಿಯ ಕಲಿಸುತ್ತಾ

ಮೊದಲು ಗುರು ತಾನಾಗಿ

ತೊದಲು ನುಡಿಯ ಕಲಿಸುತ್ತಾ

ಮೊದಲು ಗುರು ತಾನಾಗಿ

ಅಮ್ಮ ಎಂದು ಕರೆದಾಗ

ಅಪ್ಪಿ ಮುತ್ತು ಸುರಿಸುವಳು

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

♬♬♬♬♬♬♬♬♬♬♬♬

ವಾತ್ಸಲ್ಯದ ಸಾಗರವು

ಕಾರುಣ್ಯದ ಅಂಬರವು

ವಾತ್ಸಲ್ಯದ ಸಾಗರವು

ಕಾರುಣ್ಯದ ಅಂಬರವು

ಜಗದಲ್ಲಿರುವ ಪ್ರೀತಿಯನೆಲ್ಲ

ಪಡೆದ ಮಹಾ ದೇವತೆಯು

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

ಪ್ರೀತಿ ಮಮತೆ ಕಡಲಾಗ

ಬೆಳೆದು ಬಂದೆ ಸುಮದಂಗೆ

ಪ್ರೀತಿ ಮಮತೆ ಕಡಲಾಗ

ಬೆಳೆದು ಬಂದೆ ಸುಮದಂಗೆ

ಜಗವ ತೋರೋ ತಾಯಿಗೆ

ಸಾಟಿ ಇಲ್ಲ ಜಗದಾಗೆ

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

ಚಂದಮಾಮ ಮುಗಿಲಾಗ

ನಾನು ತಾಯಿ ಮಡಿಲಾಗ

 

Leave a Reply

Your email address will not be published. Required fields are marked *