ಬಾಣನ ಭಂಗಿಸಿದಂಥ – Venunaada Baaro Song Lyrics in Kannada

PK-Music

ಪುತ್ತೂರು ನರಸಿಂಹನಾಯಕ

ಬಾಣನ ಭಂಗಿಸಿದಂಥ
ಭಾವಜನಯ್ಯನೆ ಬಾರೋ

ಬಾಣನ ಭಂಗಿಸಿದಂಥ
ಭಾವಜನಯ್ಯನೆ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

♬♬♬♬♬♬♬♬♬♬♬♬

ಪೂತನಿಯ ಮೊಲೆಯುಂಡ
ನವನೀತ ಚೋರನೇ ಬಾರೋ
ಪೂತನಿಯ ಮೊಲೆಯುಂಡ
ನವನೀತ ಚೋರನೇ ಬಾರೋ

ಭೀತ ರಾವಣನ ಸಂಹರಿಸಿದ
ಸೀತಾನಾಯಕ ಬಾರೋ

ಭೀತ ರಾವಣನ ಸಂಹರಿಸಿದ
ಸೀತಾನಾಯಕ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

♬♬♬♬♬♬♬♬♬♬♬♬

ಬಿಲ್ಲಮುರಿದು ಮಲ್ಲರ ಗೆದ್ದ
ಪುಲ್ಲನಾಭನೇ ಬಾರೋ
ಬಿಲ್ಲಮುರಿದು ಮಲ್ಲರ ಗೆದ್ದ
ಪುಲ್ಲನಾಭನೇ ಬಾರೋ

ಗೊಲ್ಲತೇರೊಡನೆ ನಲಿವ
ಚೆಲುವ ಮೂರುತಿ ಬಾರೋ

ಗೊಲ್ಲತೇರೊಡನೆ ನಲಿವ
ಚೆಲುವ ಮೂರುತಿ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

♬♬♬♬♬♬♬♬♬♬♬♬

ಮಂದರಗಿರಿ ಎತ್ತಿದಂಥ
ಇಂದಿರೆ ರಮಣನೇ ಬಾರೋ

ಮಂದರಗಿರಿ ಎತ್ತಿದಂಥ
ಇಂದಿರೆ ರಮಣನೇ ಬಾರೋ
ಕುಂದದೇ ಗೋವುಗಳ ಕಾಯ್ದ
ಪುಂಡರೀಕಾಕ್ಷನೇ ಬಾರೋ

ಕುಂದದೇ ಗೋವುಗಳ ಕಾಯ್ದ
ಪುಂಡರೀಕಾಕ್ಷನೇ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ಬಾರೋ ಬಾರೋ
ವೇಣುನಾದ ಬಾರೋ
ವೇಂಕಟರಮಣನೇ ಬಾರೋ

♬♬♬♬♬♬♬♬♬♬♬♬

 

ನಾರಿಯರ ಮನೆಗೆ ಪೋಗುವ
ವಾರಿಜನಾಭನೇ ಬಾರೋ

ನಾರಿಯರ ಮನೆಗೆ ಪೋಗುವ
ವಾರಿಜನಾಭನೇ ಬಾರೋ
ಈರೇಳು ಭುವನವ ಕಾಯುವ
ಮಾರನಯ್ಯನೇ ಬಾರೋ

ಈರೇಳು ಭುವನವ ಕಾಯುವ
ಮಾರನಯ್ಯನೇ ಬಾರೋ

ಬಾರೋ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

♬♬♬♬♬♬♬♬♬♬♬♬

ಶೇಷಶಯನ ಮೂರುತಿಯಾದ
ವಾಸುದೇವನೇ ಬಾರೋ
ಶೇಷಶಯನ ಮೂರುತಿಯಾದ
ವಾಸುದೇವನೇ ಬಾರೋ

ದಾಸರೊಳು ದಾಸನಾದ…

ಆಆಆಆಆಆಆ

ದಾಸರೊಳು ದಾಸನಾದ
ಪುರಂದರ ವಿಠಲ ಬಾರೋ

ದಾಸರೊಳು ದಾಸನಾದ
ಪುರಂದರ ವಿಠಲ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ಬಾಣನ ಭಂಗಿಸಿದಂಥ
ಭಾವಜನಯ್ಯನೆ ಬಾರೋ

ಬಾಣನ ಭಂಗಿಸಿದಂಥ
ಭಾವಜನಯ್ಯನೆ ಬಾರೋ

ಬಾರೋ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ವೇಣುನಾದ ಬಾರೋ
ವೇಂಕಟರಮಣನೇ ಬಾರೋ

ವೇಂಕಟರಮಣನೇ ಬಾರೋ

ವೇಂಕಟರಮಣನೇ ಬಾರೋ

 

 

Leave a Reply

Your email address will not be published. Required fields are marked *