ಮುತ್ತು ಮುತ್ತು ಮಾತು ಮುತ್ತು – Muttu Muttu Maathu Mutthu Song Lyrics in Kannada – Mruthyunjaya

PK-Music

ಚಿತ್ರ: ಮೃತ್ಯುಂಜಯ
ಗಾಯಕರು: ಎಸ್ ಪಿ ಬಿ & ಮಂಜುಳಾ ಗುರುರಾಜ್
ಸಂಗೀತ : ಉಪೇಂದ್ರ ಕುಮಾರ್
ಸಾಹಿತ್ಯ: ಚಿ. ಉದಯಶಂಕರ್

ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು
ಹಿತವಾಗಿ ಸುಖವಾಗಿ
ಸವಿಯಾದ ಕನಸಾಗಿ
ಮನ ಉಯ್ಯಾಲೆಯ ಆಡಿದೆ
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು
ಹಿತವಾಗಿ ಸುಖವಾಗಿ
ಸವಿಯಾದ ಕನಸಾಗಿ
ಮನ ಉಯ್ಯಾಲೆಯ ಆಡಿದೆ
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು

♫♫♫♫♫♫♫♫♫♫♫♫♫


ನಲ್ಲೆ ನಡೆವಾಗ ನಡುವೇನು ಅಂದ
ಗಿರಿ ನವಿಲೊಂದು ಕುಣಿದಂತೆ ಚಂದ

ನಲ್ಲೆ ನಡೆವಾಗ ನಡುವೇನು ಅಂದ
ಗಿರಿ ನವಿಲೊಂದು ಕುಣಿದಂತೆ ಚಂದ
ನಲ್ಲ ನುಡಿವಾಗ ದನಿಯೇನು ಚಂದ
ಅರಗಿಣಿಯಂತೆ ಮಾತೆಲ್ಲ ಅಂದ
ಜೊತೆಯಾಗಿ ನಡೆವಾಗ
ಒಲವಿಂದ ನುಡಿವಾಗ
ಮತ್ತೆ ಮಧುಮಾಸವು ಬಂದಿದೆ
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು
ಹಿತವಾಗಿ ಸುಖವಾಗಿ
ಸವಿಯಾದ ಕನಸಾಗಿ
ಮನ ಉಯ್ಯಾಲೆಯ ಆಡಿದೆ
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು
♫♫♫♫♫♫♫♫♫♫♫♫♫

ಸುಳಿ ಮಿಂಚೊಂದು ಬಾನಿಂದ ಜಾರಿ
ನನ್ನ ಮೈ ಎಲ್ಲಾ ಹರಿದಾಡಿತೇನೋ

ಸುಳಿ ಮಿಂಚೊಂದು ಬಾನಿಂದ ಜಾರಿ
ನನ್ನ ಮೈ ಎಲ್ಲಾ ಹರಿದಾಡಿತೇನೋ
ನನ್ನ ಉಸಿರಾಟ ಬಿಸಿಯಾಗಿ ಹೋಗಿ
ತನು ಅರಳುತ್ತ ಹೂವಾಯಿತೇನೋ
ಇದು ತಾನೇ ಅನುರಾಗ
ಇದು ತಾನೇ ಶುಭಯೋಗ
ಮನ ಆನಂದವಾ ಕಂಡಿದೆ
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು
ಹಿತವಾಗಿ ಸುಖವಾಗಿ
ಸವಿಯಾದ ಕನಸಾಗಿ
ಮನ ಉಯ್ಯಾಲೆಯ ಆಡಿದೆ
ಮುತ್ತು ಮುತ್ತು ಮಾತು ಮುತ್ತು
ನಿನ್ನ ಮುತ್ತು ತಂದ ಮತ್ತು

Leave a Reply

Your email address will not be published. Required fields are marked *