ಎಲೆಗಳು ನೂರಾರು – Elegalu Nooraru Song Lyrics – C Ashwath

PK-Music

ಸುಗಮ ಸಂಗೀತ ಯಾತ್ರೆ
ಸಂಗೀತ: ಸಿ ಅಶ್ವಥ್
ಸಾಹಿತ್ಯ: H S ವೆಂಕಟೇಶ
ಮೂರ್ತಿ

ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ
ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ
ಎಲೆಗಳು ನೂರಾರು
ಭಾವದ ಎಳೆಗಳು ನೂರಾರು
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ ಭಾಷೆ ಪಂಥ ಹಲವು
ಅವುಗಳ ಹಿಂದೆ ಮಾತ್ರ

ಒಂದೇ ಒಲವು
ಎಲೆಗಳು ನೂರಾರು
ಭಾವದ ಎಳೆಗಳು ನೂರಾರು
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ ಭಾಷೆ ಪಂಥ ಹಲವು
ಅವುಗಳ ಹಿಂದೆ ಮಾತ್ರ

ಒಂದೇ ಒಲವು
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ
ನೀಗೋಣ ಭಿನ್ನತೆ ನೀಗೋಣ
ಸಾವಿರ ಹೆಜ್ಜೆ ಒಂದೇ ಗುರಿಗಾಗಿ

♫♫♫♫♫♫♫♫♫♫♫♫

ಕಿಡಿಗಳು ನೂರಾರು
ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಸೂರ್ಯ ಚಂದ್ರ ಲಾಂದ್ರ, ಹಣತೆ
ಅವುಗಳ ಹಿಂದೆ ಮಾತ್ರ

ಒಂದೇ ಘನತೆ
ಕಿಡಿಗಳು ನೂರಾರು
ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಸೂರ್ಯ ಚಂದ್ರ ಲಾಂದ್ರ ಹಣತೆ
ಅವುಗಳ ಹಿಂದೆ ಮಾತ್ರ

ಒಂದೇ ಘನತೆ
ತೆರೆಯೋಣ ಹೃದಯ ತೆರೆಯೋಣ

ನಾವು ನೀವು ಸೇರಿ ಒಂದಾಗಿ
ಮರೆಯೋಣ ಭೇದ ಮರೆಯೋಣ
ನದಿಗಳು ಕೂಡಿದ

ಪ್ರೀತಿಯ ಕಡಲಾಗಿ

ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ
ಲಲ್ಲಲ ಲಲ್ಲಲ್ಲಾಲಾ ಲಲ್ಲಲ ಲಲ್ಲಲ್ಲಾ

♫♫♫♫♫♫♫♫♫♫♫♫

ಪದಗಳು ನೂರಾರು
ಬದುಕಿನ ಹದಗಳು ನೂರಾರು
ಪದಗಳ ಹಿಂದೆ ಒಂದೇ ಉಸಿರು
ಅಕ್ಕರೆಯಿಂದ ಒಟ್ಟಿಗೆ ಬಾಳೋಣ
ಭಾರತ ಮಾತೆಗೆ ನಮ್ಮ

ಪ್ರೀತಿ ತೋರೋಣ
ಪದಗಳು ನೂರಾರು
ಬದುಕಿನ ಹದಗಳು ನೂರಾರು
ಪದಗಳ ಹಿಂದೆ ಒಂದೇ ಉಸಿರು
ಅಕ್ಕರೆಯಿಂದ ಒಟ್ಟಿಗೆ ಬಾಳೋಣ
ಭಾರತ ಮಾತೆಗೆ ನಮ್ಮ

ಪ್ರೀತಿ ತೋರೋಣ
ಕಟ್ಟೋಣ ನಾಡನು ಕಟ್ಟೋಣ
ನಾವು ನೀವು ಸೇರಿ ಒಂದಾಗಿ
ಮುಟ್ಟೋಣ ಮಾಡನು ಮುಟ್ಟೋಣ
ತಾರೆಗಳೇ ನಾಡಿನ ಸೂರಾಗಿ
ತಾರೆಗಳೇ ನಾಡಿನ ಸೂರಾಗಿ
ತಾರೆಗಳೇ ನಾಡಿನ ಸೂರಾಗಿ

Leave a Reply

Your email address will not be published. Required fields are marked *