Eno Santhosha Eno Ullasa Song Lyrics – Putani Agent 123

PK-Music

ಚಿತ್ರ : ಪುಟಾಣಿ ಏಜೆಂಟ್ 123
ಎಸ್ ಪಿ ಬಾಲು, ಎಸ್
ಜಾನಕಿ

ಏನೋ ಸಂತೋಷ

ಏನೋ ಉಲ್ಲಾಸ

ಏನೋ ವಿಶೇಷ ದಿನ

ಎಂದೂ ಮುಗಿಯದ

ಈ ಪ್ರೇಮಬಂಧನ

ಜನ್ಮ ಜನ್ಮದಾ

ಈ ಆತ್ಮಬಂಧನ

ಏನೋ ಸಂತೋಷ

ಏನೋ ಉಲ್ಲಾಸ

ಏನೋ ವಿಶೇಷ ದಿನ

ಎಂದೂ ಮುಗಿಯದ

ಈ ಪ್ರೇಮಬಂಧನ

ಜನ್ಮ ಜನ್ಮದಾ

ಈ ಆತ್ಮಬಂಧನ

♫♫♫♫♫♫♫♫♫♫♫♫

ನನ್ನಾಸೆ ನಿನ್ನಾಸೆ

ಒಂದಾಗಿ ಸೇರಿ ಏನೇನೋ ಕೋರಿ

ಉಯ್ಯಾಲೆ ತಾನಾಡಿದೆ

ನಿನ್ನಲ್ಲಿ ನನ್ನಲ್ಲಿ

ಒಲವೆಲ್ಲ ಕೂಡಿ ಗೆಲುವಿಂದ ಹಾಡಿ

ಎಲ್ಲೆಲ್ಲೊ ಓಲಾಡಿದೆ

ದಾಹವೊ ಮೋಹವೊ

ಹೂ ಬಳ್ಳಿಯೊಂದು ಮರಸುತ್ತಿ ಬಂದು

ತಾ ನೀಡೆ ಆಲಿಂಗನ

ಸಂಚಿನ ಮಿಂಚಿನ

ಕಣ್ಣೆರಡು ಕೂಡಿ ಮಾಡಿರಲು ಮೋಡಿ

ಮೈಯಲ್ಲಿ ಮೃದು ಕಂಪನ

ಇಂದೇಕೋ ನಮ್ಮಲ್ಲಿ

ಇಂತಹ ತಲ್ಲಣ

ಏನೋ ಸಂತೋಷ

ಏನೋ ಉಲ್ಲಾಸ

ಏನೋ ವಿಶೇಷ ದಿನ

ಎಂದೂ ಮುಗಿಯದ

ಪ್ರೇಮಬಂಧನ

ಜನ್ಮಜನ್ಮದಾ

ಆತ್ಮಬಂಧನ

♫♫♫♫♫♫♫♫♫♫♫♫

ನೀನಲ್ಲಿ ನಾನಿಲ್ಲಿ

ನೋಟದಲ್ಲಿ ನೋಟ ನೆಟ್ಟು

ಚೆಲ್ಲಾಟ ನೀನಾಡಿದೆ

ಹಾಡುತ ಆಡುತ

ಮನವೆಂಬ ಹಕ್ಕಿ ಒಲವೆಲ್ಲ ಉಕ್ಕಿ

ಬಾನಲ್ಲಿ ಹಾರಾಡಿದೆ

ನಿನ್ನಿಂದ ನನ್ನಂದ

ಹೂವಲ್ಲಿ ಜೇನು ನನ್ನಲ್ಲಿ ನೀನು

ಬಾಳೆಲ್ಲ ಹಾಯಾಗಿದೆ

ನಾವೆಂದು ಒಂದೆಂದು

ನಮ್ಮಂತರಂಗ ಆನಂದರಂಗ

ಅನುರಾಗ ತಾ ತಂದಿದೆ

ತಂಗಾಳಿ ತಂಪಾದ

ಸಂದೇಶ ಸಾರಿದೆ

ಏನೋ ಸಂತೋಷ

ಏನೋ ಉಲ್ಲಾಸ

ಏನೋ ವಿಶೇಷ ದಿನ

ಎಂದೂ ಮುಗಿಯದ

ಪ್ರೇಮಬಂಧನ

ಆತ್ಮಬಂಧನ

ಆತ್ಮಬಂಧನ

ಆತ್ಮಬಂಧನ

 

Leave a Reply

Your email address will not be published. Required fields are marked *