Food Cart- ಸ್ವಾವಲಂಬಿ ಸಾರಥಿ ಯೋಜನೆ ಸ್ವಯಂ ಉದ್ಯೋಗ ಅರ್ಜಿ ಆಹ್ವಾನ.!
ಸ್ವಾವಲಂಬಿ ಸಾರಥಿ ಯೋಜನೆಯಡಿ ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ 4 ಚಕ್ರದ ವಾಹನವನ್ನು ಖರೀದಿಸಲು 2024-25 ಸಾಲಿನಲ್ಲಿ ನಿಗಮವು ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್ ನ ಮೂಲಕ ಸಾಲದ ಜೊತೆಗೆ ಸರ್ಕಾರವು 75% ಸಬ್ಸಿಡಿಯನ್ನು ನೀಡಲು ನಿರ್ಧರಿಸಿದೆ.
ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮವು ( Dr. B.R Ambedkar Development Corporation) Food Cart ಉದ್ಯೋಗ ಮಾಡಲು ಬಯಸುವ ನಿರುದ್ಯೋಗಿಗಳಿಗೆ 4 ಚಕ್ರದ ವಾಹನವನ್ನು ಖರೀದಿಸಲು ಸೇವಾ ಸಿಂಧು ಪೋರ್ಟಲ್ ನ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸಬಯಸುವ ಆಕಾಂಕ್ಷಿಗಳು ಕೊನೆ ದಿನಾಂಕ ಮುಕ್ತಾಯದ ಒಳಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದೇ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ ಅನ್ನು Join ಆಗಲು ಇಲ್ಲಿ ಕ್ಲಿಕ್ ಮಾಡಿ.
Food Cart ಉದ್ಯೋಗ ಮಾಡಲು ಬಯಸುವ ಆಕಾಂಕ್ಷಿಗಳು ಆನ್ ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಈ ಅರ್ಜಿಗೆ ಸಂಬಂಧಿಸಿದಂತೆ ಯಾವ ದಾಖಲೆಗಳು ಬೇಕು, ಈ ಯೋಜನೆಗೆ ಯಾರೆಲ್ಲಾ ಅರ್ಹರು, ಕೊನೆಯ ದಿನಾಂಕ ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ಅರ್ಹ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದು.
Food Cart Subsidy Details: ಸಬ್ಸಿಡಿ ಮಾಹಿತಿ
ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ Food Cart ಉದ್ಯೋಗ ಮಾಡಲು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಆಕಾಂಕ್ಷಿಗಳಿಗೆ ಬ್ಯಾಂಕ್ ನ ಮೂಲಕ ಸಾಲ ಸೌಲಭ್ಯವನ್ನು ನೀಡಿ ಸರ್ಕಾರದಿಂದ 75% ಸಬ್ಸಿಡಿಯನ್ನು ನೀಡಲಾಗುವುದು ಅಂದರೆ ಸರ್ಕಾರವೇ ನಿಮ್ಮ ಸಾಲದ ಮೊತ್ತವನ್ನು ಕಟ್ಟುತ್ತದೆ ಮತ್ತು ಬಾಕಿ ಹಣವನ್ನು ಬಡ್ಡಿಸಹಿತ ಸಾಲವನ್ನಾಗಿ ನೀಡುತ್ತದೆ.
- ವೆಚ್ಚ: ಗರಿಷ್ಠ 4 ಲಕ್ಷ
- ಸಹಾಯ ಧನ: ರೂ. 75%
Food Cart Subsidy Details: ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.!
- ಆಧಾರ್ ಕಾರ್ಡ್ – Aadhar Card
- ಪಡಿತರ ಚೀಟಿ – Ration Card
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ – Caste and Income Certificate
- ಆಧಾರ್ ಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ – Mobile Number
- ವಾಹನ ಚಾಲನಾ ಪರವಾನಗಿ – Driving License
Food Cart Subsidy Scheme: ಯೋಜನೆಗೆ ಯಾರೆಲ್ಲಾ ಅರ್ಹರು.?
ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಕುರಿ ಸಾಕಾಣಿಕೆ ಮಾಡಲು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು.
- ಭಾರತೀಯ ನಾಗರೀಕರಾಗಿರಬೇಕು.
- ಕರ್ನಾಟಕದ ನಿವಾಸಿಯಾಗಿರಬೇಕು.
- ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು.
- ಗುರುತಿಸಿದ ವರ್ಗದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.
- ಆಕಾಂಕ್ಷಿಯು ಮತ್ತು ಕುಟುಂಬದವರು ಯಾವುದೇ ಸರ್ಕಾರಿ ಅಥವಾ ಅರೆ ಸರ್ಕಾರಿ ಹುದ್ದೆಯನ್ನು ಹೊಂದಿರಬಾರದು.
- ಈ ಮೊದಲು ನಿಗಮದ ಮೂಲಕ ಆಕಾಂಕ್ಷಿ ಅಥವಾ ಕುಟುಂಬಸ್ಥರು ಯಾವುದೇ ಸೌಲಭ್ಯವನ್ನು ಪಡೆದಿರಬಾರದು.
Food Cart Subsidy Scheme: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ Food Cart ಉದ್ಯೋಗ ಮಾಡಲು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು 2024 ಡಿಸೆಂಬರ್ 29 ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಬೇಕು, ದಿನಾಂಕ ಮುಗಿದ ನಂತರ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
Food Cart Subsidy Scheme: ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು.?
ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ Food Cart ಉದ್ಯೋಗ ಮಾಡಲು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕಛೇರಿಗೆ ದಾಖಲೆಗಳೊಂದಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
Food Cart Subsidy Scheme: ಅರ್ಜಿಯನ್ನು ಸಲ್ಲಿಸುವ ವಿಧಾನ.
- ಮೊದಲು ಸೇವಾ ಸಿಂಧು ಪೋರ್ಟಲ್ ನಲ್ಲಿ https://sevasindhuservices.karnataka.gov.in/ ನಿಮ್ಮ Email ID/Mobile No. ನ ಮೂಲಕ ಪಾಸ್ ವರ್ಡ್ ಹಾಕಿ ಲಾಗಿನ್ ಮಾಡಿಕೊಳ್ಳಬೇಕು.
- Service Name ಪಟ್ಟಿಯಲ್ಲಿ Social Welfare ಇಲಾಖೆಯ ಅಡಿಯಲ್ಲಿ ಬರುವ Self Employment – Direct Loan Scheme ಅನ್ನು ಆಯ್ಕೆ ಮಾಡಿ.
- ಆಧಾರ್ ಕೆವೈಸಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD ನಂಬರ್ ರೇಷನ್ ಕಾರ್ಡ್ ವಿವರ ಮೊಬೈಲ್ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸಿ Submit ಮೇಲೆ ಕ್ಲಿಕ್ ಮಾಡಿ.

- ನಂತರ ಅಗತ್ಯ ದಾಖಲೆಗಳನ್ನು Upload ಮಾಡಿ Submit ಮೇಲೆ ಕ್ಲಿಕ್ ಮಾಡಿ
- Acknowledgement ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.
jmi8im