ಹಾಡು ಕೋಗಿಲೆ – Hadu kogile nalidadu kogile Song Lyrics in Kannada

ಗಾಯಕರು: ರಾಜ್
ಕುಮಾರ್

ಹಾಡು ಕೋಗಿಲೆ
ನಲಿದಾಡು ಕೋಗಿಲೆ
ಹಾಡು ಕೋಗಿಲೆ
ನಲಿದಾಡು ಕೋಗಿಲೆ
ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ
ಎಂದು ಹಾಡು
ಈಗಲೆ
ಎಂದು ಹಾಡು
ಈಗಲೇ
ಹಾಡು ಕೋಗಿಲೆ
ನಲಿದಾಡು ಕೋಗಿಲೆ
ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ
ಎಂದು ಹಾಡು
ಈಗಲೆ
ಎಂದು ಹಾಡು
ಈಗಲೇ
ಹಾಡು ಕೋಗಿಲೆ
ನಲಿದಾಡು ಕೋಗಿಲೆ
♬♬♬♬♬♬♬♬♬♬♬♬♬♬♬♬
ಹರಿವ ನದಿಯ
ಕಲರವದಲಿ
ಹರಿವ ನದಿಯ
ಕಲರವದಲಿ
ನಿನ್ನ ದನಿಯು
ಸೇರಲಿ
ಹರಿವ ನದಿಯ
ಕಲರವದಲಿ
ನಿನ್ನ ದನಿಯು
ಸೇರಲಿ
ಗಾಳಿಯೊಡನೆ
ತೇಲಿ ಹೋಗಿ
ಗಾಳಿಯೊಡನೆ
ತೇಲಿ ಹೋಗಿ
ದೂರ ದೂರ ಸಾಗಲಿ
ಎಲ್ಲಿ ತಿರುಗಲಲ್ಲಿ
ನಿನ್ನ
ಮಧುರ ಗಾನ ಕೇಳಲಿ
ಮಧುರ ಗಾನ ಕೇಳಲೀ
ಹಾಡು ಕೋಗಿಲೆ
ನಲಿದಾಡು ಕೋಗಿಲೆ
♬♬♬♬♬♬♬♬♬♬♬♬♬♬♬♬
ಮಧುವನರಸಿ ಹೋಗುತಿರುವ
ದುಂಬಿಗಳು ಕೇಳಲಿ
ಮಧುವನರಸಿ ಹೋಗುತಿರುವ
ದುಂಬಿಗಳು ಕೇಳಲಿ
ಹೃದಯ ತುಂಬಿ
ಬಂದ ದನಿಗೆ
ತಮ್ಮ ಶೃತಿಯ
ಬೆರಸಲಿ
ಹೃದಯ ತುಂಬಿ
ಬಂದ ದನಿಗೆ
ತಮ್ಮ ಶೃತಿಯ
ಬೆರಸಲಿ
ಕುಸುಮ ಕುಸುಮದಲ್ಲು
ಅವನ
ನಾಮ ತುಂಬಿ
ಹೋಗಲಿ
ಹಾಡು ಕೋಗಿಲೆ
ನಲಿದಾಡು ಕೋಗಿಲೆ
♬♬♬♬♬♬♬♬♬♬♬♬♬♬♬♬
ನಿನ್ನ ದನಿಯ
ಸವಿಯ ಕೇಳಿ
ನಿನ್ನ ದನಿಯ
ಸವಿಯ ಕೇಳಿ
ಜೀವ ರಾಶಿ ನಲಿಯಲಿ
ನಿನ್ನ ದನಿಯ
ಸವಿಯ ಕೇಳಿ
ಜೀವ ರಾಶಿ ನಲಿಯಲಿ
ಎಲ್ಲ ಮರೆತು
ನಿನ್ನ ಸ್ವರಕೆ
ಎಲ್ಲ ಮರೆತು
ನಿನ್ನ ಸ್ವರಕೆ
ಕೊರಳ ಬೆರಸಿ
ಹಾಡಲಿ
ರಾಘವೇಂದ್ರನೆಂಬ
ಧ್ಯಾನ
ಜಗವನೆಲ್ಲ ಕುಣಿಸಲಿ
ಜಗವನೆಲ್ಲ ಕುಣಿಸಲೀ
ಹಾಡು ಕೋಗಿಲೆ
ನಲಿದಾಡು ಕೋಗಿಲೆ
ರಾಘವೇಂದ್ರ,
ರಾಘವೇಂದ್ರ
ರಾಘವೇಂದ್ರ,
ರಾಘವೇಂದ್ರ
ಎಂದು ಹಾಡು
ಈಗಲೆ
ಎಂದು ಹಾಡು
ಈಗಲೇ
ಹಾಡು ಕೋಗಿಲೆ
ನಲಿದಾಡು ಕೋಗಿಲೆ

Leave a Reply

Your email address will not be published. Required fields are marked *