ಸೂರ್ಯನ ಕಾಂತಿಗೆ – Suryana Kanthige suryane Saati Lyrics in kannada – Thayige thakka maga Kannada Movie


ಚಿತ್ರ: ತಾಯಿಗೆ ತಕ್ಕ ಮಗ

..........ಅಅಅ
..….ಆಆಆ…..ಆಆಆಆ..
321
ಲಲಲಲಾ
ಲಲಲಲಾ
...ಲಾ

ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ

ಹೋಲಿಸಲಾರಿಲ್ಲ….
ನಿನ್ನೀ ಅಂದಕೆ ನೀನೆ ಸಾಟಿ
ಬೇರೆ ಯಾರಿಲ್ಲ
ನಿನ್ನ ಹೋಲುವರಾರಿಲ್ಲ..

ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ

ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೆ ಸಾಟಿ
ಬೇರೆ ಯಾರಿಲ್ಲ
ಆಹಾ ಹೋಲುವರಾರಿಲ್ಲ

♫♫♫♫♫♫♫♫♫♫♫♫

ನಿನ್ನಾ ನೋಟದಲಿ ಕಣ್ಣ ಮಿಂಚಿನಲಿ

ಆಸೆ ಹೂವಾಗಿದೆ..
ಹುಂಹುಂ
ನಿನ್ನಾ ಮಾತಿನಲಿ ನಿನ್ನ ಸ್ನೇಹದಲಿ
ಜೀವ ಹಾಯಾಗಿದೆ
ನಿನ್ನಾ ರೂಪದಲಿ ಕಣ್ಣ ದೀಪದಲಿ
ಬಾಳು ಜೇನಾಗಿದೆ
ನಿನ್ನಾ ಮೋಹದಲಿ ಪ್ರೇಮಜಾಲದಲಿ
ಬಯಕೆ ಓಲಾಡಿದೆ
ನಿನ್ನಲ್ಲಿ ನಾನು ನಿನ್ನಿಂದ
ನಾನು

ನಾನಿಂದು ನಿನ್ನಲ್ಲಿ ಒಂದಾದೆನು..

ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ

ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೆ ಸಾಟಿ
ಬೇರೆ ಯಾರಿಲ್ಲ
ಆಹಾ ಹೋಲುವರಾರಿಲ್ಲ.
♫♫♫♫♫♫♫♫♫♫♫♫
ನಿನ್ನಾ ಹಾಡಿನಲಿ ನಿನ್ನಾ ಮೋಡಿಯಲಿ
ಕಲ್ಲೇ ನೀರಾಗಿದೆ
ಹೆಣ್ಣು ಜೀವವಿದು ಹೇಗೆ ನಿಲ್ಲುವುದು
ಸೋತು ಶರಣಾಗಿದೆ

ರಾಗಭಾವಗಳು ತಾಳ ಮೇಳಗಳು

ಸೇರಿ ಒಂದಾಗಿದೆ
..…..
....
ಆಆಆ..
ಆಆಆ..
ಆಆಆ..ಆಆಆ..
ರಾಗ ಭಾವಗಳು ತಾಳ ಮೇಳಗಳು
ಸೇರಿ ಒಂದಾಗಿದೆ
ಬೇರೆ ಭಾವನೆಯೆ ದೂರವಾಗಿರಲು
ಸೋಲು ಇನ್ನೆಲ್ಲಿದೆ
ಹೂವಂತೆ ನೀನು ನಾರಂತೆ ನಾನು
ನಿನ್ನಿಂದ ಹೂಮಾಲೆ ನಾನಾದೆನು

ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ

ಬೇರೆ ಯಾರಿಲ್ಲ
ನಿನ್ನೀ ಅಂದಕೆ ನೀನೆ ಸಾಟಿ
ಬೇರೆಯಾರಿಲ್ಲ
ನಿನ್ನ ಹೋಲುವರಾರಿಲ್ಲ
ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ
ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೆ ಸಾಟಿ
ಬೇರೆ ಯಾರಿಲ್ಲ
ನಿನ್ನ ಹೋಲುವರಾರಿಲ್ಲ..
ಹುಂ.ಹುಂ ಹೋಲುವರಾರಿಲ್ಲ..

Leave a Reply

Your email address will not be published. Required fields are marked *