ಸಿರಿವಂತನಾದರೂ – Sirivanthanadaru Lyrics – Sangama Kannada Movie

ಚಿತ್ರ: ಸಂಗಮ

ಹ್ಮು….ಹ್ಮುಹ್ಮುಹ್ಮು….

ಆಹಾ…..

ಓಹೋ….



ಸಿರಿವಂತನಾದರೂ

ಕನ್ನಡನಾಡಲ್ಲೇ ಮೆರೆವೆ

ಭಿಕ್ಷುಕನಾದರೂ

ಕನ್ನಡ ನಾಡಲ್ಲೇ ಮಡಿವೆ

ಸಿರಿವಂತನಾದರೂ

ಕನ್ನಡ ನಾಡಲ್ಲೇ ಮೆರೆವೆ

ಭಿಕ್ಷುಕನಾದರೂ

ಕನ್ನಡ ನಾಡಲ್ಲೇ ಮಡಿವೆ

ಸಿರಿವಂತಳಾದರೂ

ಕನ್ನಡ ನಾಡಲ್ಲೇ ಮೆರೆವೆ

ಭಿಕ್ಷುಕಿಯಾದರೂ

ಕನ್ನಡ ನಾಡಲ್ಲೇ ಮಡಿವೆ

ಸಿರಿವಂತನಾದರೂ

ಕನ್ನಡ ನಾಡಲ್ಲೇ ಮೆರೆವೆ

♫♫♫♫♫♫♫♫♫♫♫♫

ಸಂಗೀತ ಕಲೆ ಮೆಚ್ಚಿ

ವೀಣೆಯ ಪಿಡಿದೊಡೆ

ಸಂಗೀತ ಕಲೆ ಮೆಚ್ಚಿ

ವೀಣೆಯ ಪಿಡಿದೊಡೆ

ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ

ವೀರ ಖಡಗವ ಝಳಪಿಸುವಾ

ಧೀರ ನಾನಾದೊಡೇ

ಚಾಮುಂಡಾಂಬೆಯ ಕರದಲ್ಲಿ ಹೊಳೆವೆ

ಸಿರಿವಂತಳಾದರೂ

ಕನ್ನಡ ನಾಡಲ್ಲೇ ಮೆರೆವೆ

ಭಿಕ್ಷುಕಿಯಾದರೂ

ಕನ್ನಡ ನಾಡಲ್ಲೇ ಮಡಿವೆ

ಸಿರಿವಂತನಾದರೂ

ಕನ್ನಡ ನಾಡಲ್ಲೇ ಮೆರೆವೆ

♫♫♫♫♫♫♫♫♫♫♫♫

ಶರಣರಿಗೆ ವಂದಿಪ

ಶರಣೆ ನಾನಾದೊಡೇ

ಶರಣರಿಗೆ ವಂದಿಪ

ಶರಣೆ ನಾನಾದೊಡೇ

ವಚನವೇ ಬದುಕಿನ ಮಂತ್ರವೆನುವೆ

ವೀರಗೆ ವಂದಿಪ

ಶೂರ ನಾನಾದೊಡೇ

ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೇ

ಸಿರಿವಂತನಾದರೂ

ಕನ್ನಡ ನಾಡಲ್ಲೇ ಮೆರೆವೆ

ಭಿಕ್ಷುಕಿಯಾದರೂ

ಕನ್ನಡ ನಾಡಲ್ಲೇ ಮಡಿವೆ

ಸಿರಿವಂತನಾದರೂ

ಕನ್ನಡ ನಾಡಲ್ಲೇ ಮೆರೆವೆ

♫♫♫♫♫♫♫♫♫♫♫♫

ದಾಸರಿಗೆ ವಂದಿಪ

ಅಭಿಮಾನಿಯಾದೊಡೇ

ಕನ್ನಡ ಸಾಹಿತ್ಯ ನನ್ನಾಸ್ತಿ ಎನುವೆ

ಪುಣ್ಯ ನದಿಯಲಿ

ಮೀಯುವೆನಾದೊಡೇ

ಕಾವೇರಿ ತುಂಗೆಯರ ಮಡಿಲಲ್ಲಿ ನಲಿವೆ

ಇನ್ನೊಮ್ಮೆ ಮರುಜನ್ಮ

ಪಡೆಯುವೆನಾದೊಡೆ

ಇನ್ನೊಮ್ಮೆ ಮರುಜನ್ಮ

ಪಡೆಯುವೆನಾದೊಡೆ

ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ

ಮಣ್ಣಾಗಿ ನಿಲುವೆ

ಮಣ್ಣಾಗಿ ನಿಲುವೆ

Leave a Reply

Your email address will not be published. Required fields are marked *