Song: Vedanti HeLidanu
Movie: Manasa Sarovara
Poet: Dr. G.S. Shivarudrappa
Music: Vijayabhaskar
Singer: P.B. Srinivas
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕನವರಿಸಿದನು ಹೂ ಇವಳೇ ಚೆಲುವೆ
ಇವಳ ಜೊತೆಯಲ್ಲಿ ನಾ ಸ್ವರ್ಗವನೆ ಗೆಲ್ಲುವೆ
ಸ್ವರ್ಗವನೆ ಗೆಲ್ಲುವೆ
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು ಓ ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ
ನಾನೆಷ್ಟು ಧನ್ಯ
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು
ಮಣ್ಣೆಲ್ಲಾ ಹೊನ್ನು ಹೊನ್ನು
ಮಣ್ಣೆಲ್ಲ ಹೊನ್ನು ಹೊನ್ನು
Vedanti Helidanu Lyrics
Vedaanti Helidanu Lyrics
Vedaanthi Helidanu Honnella Mannu Lyrics