ಚಿತ್ರ : |
ಭಕ್ತ ಕುಂಬಾರ |
ಗೀತ ರಚನೆ : |
ಹುಣಸೂರು ಕೃಷ್ಣಮೂರ್ತಿ |
ಸಂಗೀತ : |
ಜಿ.ಕೆ.ವೆಂಕಟೇಶ್ |
ಗಾಯನ : |
ಎಸ್. ಪಿ.ಬಾಲಸುಬ್ರಹ್ಮಣ್ಯಂ |
ವಿಠಲಾ ವಿಠಲಾ ಪಾಂಡುರಂಗ ವಿಠಲ
ಜೈ ಪಾಂಡುರಂಗ ವಿಠಲ
ವಿಠಲಾ ವಿಠಲಾ ಪಾಂಡುರಂಗ ವಿಠಲ
ಜೈ ಪಾಂಡುರಂಗ ವಿಠಲ
ಎಲ್ಲಾ ಮರೆತು ವಿಠಲಾ ಎನಲು
ಅನುಕ್ಷಣ ಆನಂದವೇ..
ವಿಠಲಾ ವಿಠಲಾ ಪಾಂಡುರಂಗ ವಿಠಲಾ
ಜೈ ಪಾಂಡುರಂಗ ವಿಠಲಾ..
♫♫♫♫♫♫♫♫♫♫♫
ಅಂಬುಜನಾಭನು ನಂಬಿದ ಜನರಿಗೆ
ಅಂಬುಜನಾಭನು ನಂಬಿದ ಜನರಿಗೆ
ಕಷ್ಟವ ಕಳೆಯುವ ಇಷ್ಟವ ಸಲಿಸುವ
ನಿರುತವು ಪಾಲಿಸೋ ಕರುಣಾಪೂರ್ಣನು
ನಿರುತವು ಪಾಲಿಸೋ ಕರುಣಾಪೂರ್ಣನು
ಪಂಢರಪುರ ವಾಸನೂ…
ವಿಠಲ ವಿಠಲಾ ಪಾಂಡುರಂಗ ವಿಠಲ
ಜೈ ಪಾಂಡುರಂಗ ವಿಠಲಾ...
♫♫♫♫♫♫♫♫♫♫♫
ಗಗನದಿ ನೀಲಿಯು ತುಂಬಿರುವಂತೆ
ಹೂವಲಿ ಪರಿಮಳ ಬೆರೆತಿರುವಂತೆ
ಭಕುತರ ಮನದಿ ಮನೆಮಾಡಿರುವೆ
ಭಕುತರ ಮನದಿ ಮನೆಮಾಡಿರುವೆ
ಧನ್ಯರ ನೀ ಮಾಡುವೇ…
ವಿಠಲ ವಿಠಲಾ ಪಾಂಡುರಂಗ ವಿಠಲ
ಜೈ ಪಾಂಡುರಂಗ ವಿಠಲ
ಎಲ್ಲಾ ಮರೆತು ವಿಠಲಾ ಎನಲು
ಅನುಕ್ಷಣ ಆನಂದವೇ…
ವಿಠಲ ವಿಠಲಾ ಪಾಂಡುರಂಗ ವಿಠಲ
ಜೈ ಪಾಂಡುರಂಗ ವಿಠಲ
ಪಾಂಡುರಂಗ ವಿಠಲ
ಜೈ ಪಾಂಡುರಂಗ ವಿಠಲಾ…