ವರವ ಕೊಡೆ ಚಾಮುಂಡಿ – Varava Kode Chamundi Lyrics – Bhakthigeethe – Chamundi devi Chamundi




ವರವ ಕೊಡೆ ಚಾಮುಂಡಿ ವರವ ಕೊಡೆ

ವರವ ಕೊಡೆ ಚಾಮುಂಡಿ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

ವರವ ಕೊಡೆ ಚಾಮುಂಡಿ ವರವ ಕೊಡೆ

ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ

ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ

ನಿನ್ನಾಣೆ ನಾ ನಿನ್ನ‌ ಪಾದ ಬಿಡೆ

ನಿನ್ನ ಪಾದ ಬಿಡೆ

 

ವರವ ಕೊಡೆ ಚಾಮುಂಡಿ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

 


ಕುಂಕುಮವು ಅರಶಿಣವು

ಹೊಳೆವಂತ ಕರಿಮಣಿಯು

ಕುಂಕುಮವು ಅರಶಿಣವು

ಹೊಳೆವಂತ ಕರಿಮಣಿಯು

ಸ್ಥಿರವಾಗಿ ಇರುವಂತೆ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

 

ವರವ ಕೊಡೆ ಚಾಮುಂಡಿ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

 


ಬಾಗಿಲಲಿ ತೋರಣ

ಮದುವೆ ಮುಂಜಿ ನಾಮಕರಣ

ಬಾಗಿಲಲಿ ತೋರಣ

ಮದುವೆ ಮುಂಜಿ ನಾಮಕರಣ

ಯಾವಾಗಲು ಆಗುವಂತೆ ವರವ ಕೊಡೆ

ನಿನ್ನಾಣೆ ನಾ ನಿನ್ನ ಪಾದ ಬಿಡೆ

ನಿನ್ನ ಪಾದ ಬಿಡೆ

 

ವರವ ಕೊಡೆ ಚಾಮುಂಡಿ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

 


ಹೆಸರುಳ್ಳ ಮನೆ ಕಟ್ಟಿ

ಹಸು ಕರುಗಳ ಸಾಲು ಕಟ್ಟಿ

ಹೆಸರುಳ್ಳ ಮನೆ ಕಟ್ಟಿ

ಹಸು ಕರುಗಳ ಸಾಲು ಕಟ್ಟಿ

ವಂಶವೃಧ್ಧಿ ಆಗುವಂತೆ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

 

ವರವ ಕೊಡೆ ಚಾಮುಂಡಿ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

 


ಮನೆಯಲ್ಲಿ ಹರುಷ ಕೊಟ್ಟು

ಮನದಲ್ಲಿ ಶಾಂತಿ ಕೊಟ್ಟು

ಮನೆಯಲ್ಲಿ ಹರುಷ ಕೊಟ್ಟು

ಮನದಲ್ಲಿ ಶಾಂತಿ ಕೊಟ್ಟು

ಭಕ್ತಿ ಹೃದಯ ತುಂಬುವಂತೆ ವರವ ಕೊಡೆ

ನಿನ್ನಾಣೆ ನಾ ನಿನ್ನ ಪಾದ ಬಿಡೆ

ನಿನ್ನ ಪಾದ ಬಿಡೆ

ವರವ ಕೊಡೆ ಚಾಮುಂಡಿ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ ವರವ ಕೊಡೆ

ವರವ ಕೊಡೆ ಚಾಮುಂಡಿ ವರವ ಕೊಡೆ

ವರವ ಕೊಡೆ ವರವ ಕೊಡೆ ವರವ ಕೊಡೆ


Leave a Reply

Your email address will not be published. Required fields are marked *