ಲೈಫ಼ು ಇಷ್ಟೇನೆ – Lifeu ishtene Song Lyrics – Pancharangi Movie Lyrics

ಚಿತ್ರ: ಪಂಚರಂಗಿ
ಲೈಫ಼ು ಇಷ್ಟೇನೆ..
ಲೈಫ಼ು ಹಿಂಗೇನೆ



ಹಾಮುದ್ದು ಕಂದನಾಗಿ ಹುಟ್ಟಿ
ಹೆಸರೂ ಗಿಸರೂ ಇಟ್ಟುಕೊಂಡು
ಹಂಗೂ ಹಿಂಗೂ ದೊಡ್ಡೊನಾಗು
ಲೈಫ಼ು ಇಷ್ಟೇನೆ
ಆಆಆಹಾಹಾ
ಎದ್ವಾ ತದ್ವಾ ಮಾರ್ಕ್ಸು ತೆಗೆದೂ
ಅಪ್ಪಾ ಹೇಳೋ ಕೋರ್ಸು ಮುಗಿಸಿ
ಸ್ನಾನ ಮಾಡ್ಕೊಂಡ್ ಕೆಲಸ ಹುಡುಕು
ಲೈಫ಼ು ಇಷ್ಟೇನೆ
ಸಂಬಳ ಬರುವ ಕೆಲಸ ಹಿಡಿದೂ
ಸಿಂಬಳ ಸುರಿವ ಮಕ್ಕಳ ಹಡೆದೂ
ಕುಂಬಳಕಾಯಿ ಹಲ್ವ ಮಾಡು
ಲೈಫ಼ು ಇಷ್ಟೇನೆ
ಟ್ಯಾವ್ಡ ಟ್ಯಾವ್ಡಡ
ನಮ್ಮ ಮಂದಿ ಪಾಪದೋರು
ಸ್ವಲ್ಪ ಹಂಗೇನೆ
ಕಣ್ಣು ಮುಚ್ಚಿಕ್ಕೊಂಡು ನೋಡು
ಲೈಫ಼ು ಹಿಂಗೇನೆ
♫♫♫♫♫ ♫♫♫♫♫ ♫♫♫♫♫
ಅಪ್ಪ ನಿನಗೆ ಟೆನ್ಷನ್ ಯಾಕೊ
ಬಿಳಿಯ ಕೂದಲಿಗೆ ಕಪ್ಪು ಬಳಕೊ
ಡಯಾಬಿಟೀಸಿಗೆ ವಾಕಿಂಗ್ ಮಾಡ್ಕೊ
ಲೈಫ಼ು ಇಷ್ಟೇನೆ
ಬೌಬೌ ಬೌಬೌಬೌ
ಅಮ್ಮಾ ನೋಡು ರಾಹುಕಾಲ
ಬಿಗಿಯಾಗ್ ಹಿಡ್ಕೊ ದೇವರ ಕಾಲು
ದೇವರೆ ಕೈಯ ಮುಗಿಯಲಿ ನಿಂಗೆ
ಲೈಫ಼ು ಇಷ್ಟೇನೆ
ಪೌ ಪೌ ಪೌ ಪೌ ಪೌ
ಗಂಡ ಹೆಂಡತಿ ಇಬ್ಬರೂ ದುಡಿದು
ಸಾಲ ಮಾಡಿ ಮನೆಯ ಕಟ್ಟಿ
ಮಕ್ಳೂ ಎಲ್ಲ್ ಹೋದ್ರಂತ ಹುಡುಕಿ
ಲೈಫ಼ು ಇಷ್ಟೇನೆ
ಮ್ಯಾವ್ ಮ್ಯಾಮ್ಯಾಮ್ಯಾವ್
ಓಡ ಬೇಡ ಸ್ಟೇಜ಼್ ನಿಂದ
ಪಾರ್ಟು ನಿಂದೇನೆ
ಬಣ್ಣ ಹಚ್ಚಿಕ್ಕೊಂಡ ಮೇಲೆ
ಲೈಫ಼ು ಹಿಂಗೇನೆ
♫♫♫♫♫ ♫♫♫♫♫ ♫♫♫♫♫
ಹುಡುಗಿ ಜೊತೆಗೆ ಜಗಳ ಆಡು
ಹಗಲೂ ರಾತ್ರಿ ಮೆಸೇಜು ಮಾಡು
ಕ್ಯಾಂಟೀನಲ್ಲೆ ಓತ್ಲಾ ಹೊಡ್ಕೊ
ಲೈಫ಼ು ಇಷ್ಟೇನೆ
ಟಂಟಣಾ ಟಣ್ ಟಣ್
ನೋಕಿಯಾದಲ್ಲಿ ಏನೇನುಂಟು
ಏರ್ ಟೆಲ್ ನಲ್ಲಿ ಏನೇನಿಲ್ಲ
ಸಿಲಬಸ್ ಗಿಂತ ಜಾಸ್ತಿ ತಿಳ್ಕೊ
ಲೈಫ಼ು ಇಷ್ಟೇನೆ
ಟ್ರಿಣ್ ಟ್ರಿಣ್ ಟ್ರಿಣ್ ಟ್ರಿಣ್
ಅಪ್ಪ ಅಮ್ಮ ಬೈತಾರಂತ
ದಿನವೂ ಕಾಲೇಜ್ ಕಡೆಗೆ ಹೋಗು
ಎಕ್ಸಾಂ ಟೈಮಲ್ಲಿ ಮೇಷ್ಟ್ರಿಗೆ ಬೈಯಿ
ಲೈಫ಼ು ಇಷ್ಟೇನೆ
ಡಂಢಣಾ ಡಣ್ ಡಣ್
ಪ್ರಾಯವೆಂಬ ಸ್ಕೂಲಿನಲ್ಲಿ
ಎಲ್ಲ ಸಂಡೇನೆ
ರೆಕ್ಕೆ ಬಿಚ್ಚಿಕ್ಕೊಂಡು ಹಾರು
ಲೈಫ಼ು ಹಿಂಗೇನೆ
♫♫♫♫♫ ♫♫♫♫♫ ♫♫♫♫♫
ಬದುಕು ನೀನು ವಾಸ್ತು ಪ್ರಕಾರ
ಕುಬೇರ ಮೂಲೆ ಮಾತ್ರ ಕಟ್ಸು
ಟಾಯ್ಲೆಟ್ ಒಳಗೆ ಹೋಗಿ ಮಲ್ಕೊ
ಲೈಫ಼ು ಇಷ್ಟೇನೆ
ಹಾಹಹಾಹಾಹಾ
ಹಿಂದಿನ ಜನ್ಮದ ರಹಸ್ಯ ತಿಳ್ಕೊ
ಮುಂದಿನ ಜನ್ಮದ ಭವಿಷ್ಯ ತಿಳ್ಕೊ
ಈಗಿನ ಜನ್ಮ ಹಾಳಾಗೊಗ್ಲಿ
ಲೈಫ಼ು ಇಷ್ಟೇನೆ
ಢಂಡ ಢಂಡಂಡಂ
ತುಂಬಾ ಒಳ್ಳೆವ್ರಪ್ಪ ನೀವು
ಪೂರ್ತಿ ಕೆಟ್ಟೊವ್ರಪ್ಪ ನಾವು
ನಮ್ಮ ಹಾಡನು ಕೇಳಲೆ ಬೇಡಿ
ಲೈಫ಼ು ಇಷ್ಟೇನೆ
ಮ್ಯಾವ್ ಮ್ಯಾಮ್ಯಾಮ್ಯಾವ್
ನಾನು ಕಂಡ ತುಂಬ ದೊಡ್ಡ
ಲೂಸು ನೀನೇನೆ
ಬಾಯಿ ಮುಚ್ಚಿಕ್ಕೊಂಡು ಹಾಡು
ಲೈಫ಼ು ಹಿಂಗೇನೆ

Lifu ishtene Song Lyrics
Laifu ishtene Song Lyrics in Kannada

Leave a Reply

Your email address will not be published. Required fields are marked *