ರೈತ ಮಕ್ಕಳಿಗೆ ಸ್ಕಾಲರ್ಶಿಪ್ | ಮುಖ್ಯಮಂತ್ರಿಗಳ ರೈತ ವಿಧ್ಯಾ ನಿಧಿ | Scholarship for former’s Children I Mukyamantrigala raita vidhya nidhi

ಕರ್ನಾಟಕದ ನೂತನ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ ತಮ್ಮ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಘೋಷಣೆ ಮಾಡಿದ ಯೋಜನೆ ಮುಖ್ಯಮಂತ್ರಿಗಳ ರೈತ ವಿದ್ಯನಿಧಿ ಯೋಜನೆ, ಅಂದರೆ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಕ್ಕೆ ಅನುಕೂಲ ವಾಗಲೆಂದು ಅವರವರ ಕೋರ್ಸ್ ಗೆ ಅನುಸಾರವಾಗಿ ಉಚಿತ ಸ್ಕಾಲರ್ಶಿಪ್ ನೀಡಲಿದ್ದಾರೆ, 


ಈ ಯೋಜನೆಯನ್ನು ದಿನಾಂಕ 05-09-2021 ಅಧಿಕೃತ ವಾಗಿ ವಿಧಾನ ಸೌಧ ದ ಬ್ಯಾಂಕ್ವೆಟ್ ಹಾಲ್ ನಲ್ಲಿ ಘೋಷಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿಸಿ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.


ಯಾವ ವಿದ್ಯಾರ್ಥಿ ಗಳಿಗೆ ಎಷ್ಟು ಸ್ಕಾಲರ್ಶಿಪ್ ಸಿಗಲಿದೆ.
ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2500, ವಿದ್ಯಾರ್ಥಿನಿಯರಿಗೆ 3000 ರೂ.
ಬಿ.ಎ. ಬಿಎಸ್ಸ್ಸಿ, ಬಿ‌.ಇ, ಇತರೆ ಪದವಿ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 5000, ವಿದ್ಯಾರ್ಥಿನಿಯರಿಗೆ 5,500 ರೂ‌
LL.B, ಪ್ಯಾರಾಮೆಡಿಕರ್ ಸೇರಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ 7,500 ವಿದ್ಯಾರ್ಥಿನಿಯರು-8000 ರೂ.
MBBS, BE, B.TEC ಸೇರಿ ಎಲ್ಲಾ ಸ್ನಾತಕೋತ್ತರ ಕೋರ್ಸ್ ವಿದ್ಯಾರ್ಥಿಗಳಿಗೆ 10 ಸಾವಿರ, ವಿದ್ಯಾರ್ಥಿನಿಯರಿಗೆ 11 ಸಾವಿರ ರೂ ನೀಡಲಿದೆ.


Leave a Reply

Your email address will not be published. Required fields are marked *