Music Composer – Nobin Paul
Singer – Vasuki Vaibhav
Backing Vocals – Harsha Ranjini, Chinmayee, Nobin Paul
Lyrics – Vasuki Vaibhav
ನೀನೇ ನನ್ನ ವೇದನೆ
ಇನ್ನೂ ನೀನೇ ನನ್ನೆಲ್ಲ ನಿವೇದನೆ
ನೀನೇ ತಾನೇ ನನ್ನ ಜೀವ ಸೂಚನೆ
ನನ್ನಲ್ಲಿದೆ.. ನಿನ್ನೆ ಹೊಳೋ ಕಲ್ಪನೆ
ಆಲಿಸು ನಸು ನಾಚುತ ನನ್ನೆಲ್ಲ ಬಣ್ಣನೆ..
ರೆಕ್ಕೆ ಆಗುವೆ ನೀ ಹಾರೋ ವೇಳೆಗೆ ನಾನು
ಓ ಓ.. ರೆಪ್ಪೆ ಆಗುವೆ
ಕೊನೆವರೆಗೂ ನಿನ್ನ ಬಾಲ ಕಾಯುವೆ
ತುದಿಗಾಲಲಿ ನಿಂತಿದೆ ಹೃದಯ ಕನಸೆಲ್ಲವ ತೆರೆದಿಡಲು
ಸಣ್ಣ ಸಣ್ಣ ಸೊಗಸಿನ ಉದಯ ಕಣ್ಣ ಮುಂದೆ ನೀನಿರಲು
ಬೇರೆ ಎಲ್ಲವ.. ನಾ ನೆನೆವೆ ನಿನ್ನ ನಂತರ
ನಿನಗೆ ಸೋಲುವ.. ವರವ ನಾ ಕೋರುವೆ ದೇವರ
ಬದುಕಿನ ತುಂಬವು ನೀನೆರೆದೆ
ಬದುಕಲಿ ಹೇಗೆ ನಾ ನೀನಿರದೇ
ಬವಣೆಗಳೆಲ್ಲವ ನೀ ತೊರೆದೆ
ನೀನೇ ನನ್ನ ಕುಶಿ ಎಲ್ಲವೂ
ನಿನ್ನ ಮುಂಗುರುಳ ತೂಗೊ ಗಾಳಿಯು ನಾನೇ ಆಗುವೆ..
ನಿನ್ನ ಮುಂಬರುವ ನೋವಿಗೂ ಇಂದು ನಾನೇ ಮಾಗುವೆ..
ಅಂಗಯ್ಯ ಮೇಲಿರುವುದೆಲ್ಲ
ನಿನ್ನ ತೋರುವ ರೇಖೆಗಳು ಅಂಗಾಲಿನ ನಡಿಗೆಗಳೆಲ್ಲ
ನಿನ್ನ ಸೇರುವ ದಾರಿಗಳು
ಹಣೆಯ ಮೇಲಿನ.. ಹೊಳೆವ ತಾರೆಯಾಗುವೆ
ಸಮಯ ಸೋತರೂ.. ನಿನ್ನ ನಗುವಾಗಿ ಸಾಗುವೆ
ನನ್ನ ಕನಸೆಲ್ಲಕು ನೀನೇ ಹೊಣೆ
ನೀನೇ ಅದರ ಶುರು ನೀನೇ ಕೊನೆ
ಬದಲಿತು ನಿನ್ನ ಕಂಡು ನನ್ನ ಬೇನೆ
ನೀನೇ ನನ್ನ ಕುಶಿ ಎಲ್ಲವೂ
ಇರುಳಲು ಕಾಣುವ ಹೊಳಪದು ನೀನು ನನ್ನಯ ಪಾಲಿಗೆ..
ಇರುವೆನು ನಾನು ತಲುಪಲು ನಿನ್ನ ಉಳಿದ ಬಾಳಿಗೆ..
ನೀನೇ ನನ್ನ ಯೋಚನೆ
ಇನ್ನೂ ನೀನೇ ನನ್ನೆಲ್ಲ ಯೋಜನೆ
ನೀನೇ ತಾನೇ.. ಒಲವ ಸೂಚನೆ
ನನ್ನಲ್ಲಿದೆ.. ನಿನ್ನೆ ಹೊಳೋ ಕಲ್ಪನೆ
ಆಲಿಸು, ನಸು ನಾಚುತ ನನ್ನೆಲ್ಲ ಬಣ್ಣನೆ..
ರೆಕ್ಕೆ ಆಗುವೆ ನೀ ಹಾರೋ ವೇಳೆಗೆ ನಾನು
ಓ ಓ.. ರೆಪ್ಪೆ ಆಗುವೆ
ಕೊನೆವರೆಗೂ ನಿನ್ನ ಬಾಲ ಕಾಯುವೆ