ಯೋಗಿ ನೀನಾಗಿ ಹೋಗಣ್ಣ – Yogi Neenaagi Hoganna Song Lyrics – Dr. Rajkumar

PK-Music

ಆಲ್ಬಮ್:
ಭಾವತರಂಗ
ಗಾಯಕ: ಡಾ.
ರಾಜ್‌ಕುಮಾರ್
ಸಂಗೀತ ನಿರ್ದೇಶಕ:
ಸಿ.ಅಶ್ವತ್
ಸಾಹಿತ್ಯ:
ಹಟಯೋಗಿ ಹೊನ್ನಪ್ಪ ನಾಯ್ಕರ್

Yogi Neenaagi Hoganna Karaoke

ಯೋಗಿ ನೀನಾಗಿ ಹೋಗಣ್ಣ

ಬೇಗನೆ ಬಾರಣ್ಣ

ಯೋಗಿ ನೀನಾಗಿ ಹೋಗಣ್ಣ

ಬೇಗನೆ ಬಾರಣ್ಣ

ಯೋಗಿ ನೀನಾಗಿ ಹೋಗಣ್ಣ

♫♫♫♫♫♫♫♫♫♫♫♫

ಮೂಗಿನ ಹೊರಳಿಗೆ ಮುಗುದಣ ಹಾಕಿ

ಹಿಡಿದಾಗ ಮನಸ

ಯೋಗಿಯ ಜೀವನ ಹಾಯಾಗಿ ಬಂತು

ಏನೆಂತ ಸೊಗಸ

ಮೂಗಿನ ಹೊರಳಿಗೆ ಮುಗುದಣ ಹಾಕಿ

ಹಿಡಿದಾಗ ಮನಸ

ಯೋಗಿಯ ಜೀವನ ಹಾಯಾಗಿ ಬಂತು

ಏನೆಂತ ಸೊಗಸ

ಹೋಗಿ ಹೋಗಿ ಹಳ್ಳಕ್ಕೆ ಬಿದ್ದರೆ

ನಿನಗೇ ವ್ಯತ್ಯಾಸ

ಹೋಗಿ ಹೋಗಿ ಹಳ್ಳಕ್ಕೆ ಬಿದ್ದರೆ

ನಿನಗೇ ವ್ಯತ್ಯಾಸ

ಹೇಗೆ ಮಾಡಲಿ ನಾನು ಎಂದು ನೀ

ಕಳೆಯಬೇಡ ದಿವಸ

ಯೋಗಿ ನೀನಾಗಿ ಹೋಗಣ್ಣ

ಬೇಗನೆ ಬಾರಣ್ಣ

ಯೋಗಿ ನೀನಾಗಿ ಹೋಗಣ್ಣ

♫♫♫♫♫♫♫♫♫♫♫♫

ಬೀಗರಂತೆ ಕೈ ಬೀಸಿ ಹೋದರೆ

ಮುಗಿಯಲಿಲ್ಲ ಕೆಲಸ

ಹಾಗೋ ಹೀಗೂ ಉಂಡು ಉರುಳಿ

ಮನೆತುಂಬಾ ಮಾಡಿ ಹೊಲಸ

ಬೀಗರಂತೆ ಕೈ ಬೀಸಿ ಹೋದರೆ

ಮುಗಿಯಲಿಲ್ಲ ಕೆಲಸ

ಹಾಗೋ ಹೀಗೂ ಉಂಡು ಉರುಳಿ

ಮನೆತುಂಬಾ ಮಾಡಿ ಹೊಲಸ

ಬೀಗ ಹಾಕಿ ಬಿಡು ಭವ ಬಾದೆಗೆ

ಗಟ್ಟಿ ಮಾಡಿ ಮನಸ

ಬೀಗ ಹಾಕಿ ಬಿಡು ಭವ ಬಾದೆಗೆ

ಗಟ್ಟಿ ಮಾಡಿ ಮನಸ  

ಕೂಗಿ ನೋಡು ಬಾಳ ಗುಡಿಗೆ

ನೀನಿಟ್ಟು ಮೇಲೆ ಕಳಶ

ಯೋಗಿ ನೀನಾಗಿ ಹೋಗಣ್ಣ

ಬೇಗನೆ ಬಾರಣ್ಣ

ಯೋಗಿ ನೀನಾಗಿ ಹೋಗಣ್ಣ

♫♫♫♫♫♫♫♫♫♫♫♫

ಬೋಧನೆಯಿಂದ ತಲೆ ಬೋಳಿಸಿದರೆ

ಸಿಗುವನೇನು ಆತ್ಮ

ಸಾಧನೆಯಿಂದ ತಲೆ ಬೆಳೆಸಿದರೆ

ನೀನೇ ಪರಮಾತ್ಮ

ಬೋಧನೆಯಿಂದ ತಲೆ ಬೋಳಿಸಿದರೆ

ಸಿಗುವನೇನು ಆತ್ಮ

ಸಾಧನೆಯಿಂದ ತಲೆ ಬೆಳೆಸಿದರೆ

ನೀನೇ ಪರಮಾತ್ಮ

ಭೇದಿಸಿ ಬಾರೋ

ಬ್ರಹ್ಮನಾಡಿಯೊಳಗಡಗಿದೆ ವಿಶ್ವಾತ್ಮ

ಭೇದಿಸಿ ಬಾರೋ

ಬ್ರಹ್ಮನಾಡಿಯೊಳಗಡಗಿದೆ ವಿಶ್ವಾತ್ಮ

ಶೋಧಿಸಿ ನೋಡು ಪ್ರಾಣ ಶಕ್ತಿ ಅದು

ತಿಳಿಯೋ ಪುಣ್ಯಾತ್ಮ

ಶೋಧಿಸಿ ನೋಡು ಪ್ರಾಣ ಶಕ್ತಿ ಅದು

ತಿಳಿಯೋ ಪುಣ್ಯಾತ್ಮ

ಯೋಗಿ ನೀನಾಗಿ ಹೋಗಣ್ಣ

ಬೇಗನೆ ಬಾರಣ್ಣ

ಯೋಗಿ ನೀನಾಗಿ ಹೋಗಣ್ಣ

ಬೇಗನೆ ಬಾರಣ್ಣ

ಯೋಗಿ ನೀನಾಗಿ ಹೋಗಣ್ಣ

 

Yogi Neenagi Hoganna Song Lyrics
Yogi Neenaagi Song Lyrics
Yogi Ninaagi Hoganna Lyrics

Leave a Reply

Your email address will not be published. Required fields are marked *