Song: Yaake Kaaduthidhe
Program: Vishwamatha
Singer: SPB, Hema Prasad
Music: G V Atri
Lyricist: N S Lakshminarayana Bhatta
Music Label : Lahari Music
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ
ಅರಿವಿಗೆ ಗುರುತೇ ತಪ್ಪಿದಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ ಗುರುತೇ ತಪ್ಪಿದಾಗ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಯಾವುದೋ ವಸಂತ ರಾತ್ರಿಯಲಿ
ಹೊಳೆವ ತಾರೆ ನೆನಪಾಗುತಿದೆ
ಯಾವುದೋ ವಸಂತ ರಾತ್ರಿಯಲಿ
ಹೊಳೆವ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ
ತೋಯುತಿದೆ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ
ಕಂಬನಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ
ಕೊರಗಿನಲಿ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ
ಅರಿವಿಗೆ ಗುರುತೇ ತಪ್ಪಿದಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ ಗುರುತೇ ತಪ್ಪಿದಾಗ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ
ಯಾಕೆ ಕಾಡುತಿದೆ ಸುಮ್ಮನೆ
ನನ್ನನು ಯಾವುದು ಈ ರಾಗ