ಮೌನಿ ನಾನು – Mouni Naanu Nudivaaga Neenu Song Lyrics in Kannada – Suryakanthi

PK-Music

ಚಿತ್ರ: ಸೂರ್ಯಕಾಂತಿ
ಗಾಯಕ: ಕಾರ್ತಿಕ್
ಸಂಗೀತ: ಇಳಯರಾಜ
ಸಾಹಿತ್ಯ: ಕವಿರಾಜ್

ಮೌನಿ ನಾನು ನುಡಿವಾಗ ನೀನು

ಧ್ಯಾನಿ ನಾನು ನನ್ನ ದೇವಿ ನೀನು

ಮೋಹಕ ನಗು ಮನಸೊಂತರ ಮಗು

ಮೋಹಕ ನಗು ಮನಸೊಂತರ ಮಗು

ಬದಲಾದೆ ನಾನು ಬಂದಮೇಲೆ ನೀನು

ಸ್ನೇಹಿತೇನೋ ದೇವತೆನೋ ತಿಳಿಯೆನು

ನನ್ನ ನಿನ್ನ ಬಂಧವೇನೋ

ಅರಿಯೆನು ಓಹೋ

ಮೌನಿ ನಾನು ನುಡಿವಾಗ ನೀನು

ಧ್ಯಾನಿ ನಾನು ನನ್ನ ದೇವಿ ನೀನು

♫♫♫♫♫♫♫♫♫♫♫♫

ತೇಲಿ ಬಂದ ಸವಿ ಸೋನೇ ನೀನು

ಕಲ್ಲಿನಂಥ ಹೃದಯದಲ್ಲಿ ಹೂವ ಬೆಳೆಸಿದೆ

ಮೋಡವಿರದ ಸುಡು ಬಾನು ನಾನು

ಮಳೆಯಬಿಲ್ಲಿನಂತೆ ನೀನು ಬಣ್ಣ ಚೆಲ್ಲಿದೆ

ಸೆಳೆದೆ ನೀ ನೀ ನನ್ನ ಒಲವಿನೂರಿಗೆ

ಇಳಿದೇ ನೀ ನೀ ನನ್ನ ಎದೆಯ ಗೂಡಿಗೆ

ನಂಗು ಒಂದೂ ಮನಸುಂಟು
ಎಂದು

ಅರಿವಾಗಿರೋದು ಇಂದು

ನನಗೇ ನಿನ್ನಿಂದಾನೆ

ಮೌನಿ ನಾನು ನುಡಿವಾಗ ನೀನು

ಧ್ಯಾನಿ ನಾನು ನನ್ನ ದೇವಿ ನೀನು

♫♫♫♫♫♫♫♫♫♫♫♫

ನೂರು ಸಾರಿ ನಿನ್ನ ನೋಡಿ ನೋಡಿ

ತಿರುಗಿ ತಿರುಗಿ ನೋಡೋ ಆಸೆ

ನನ್ನ ಕಾಡಿದೆ

ನಾವು ಸೇರಿ ನಡೆವಾಗ ದಾರಿ

ಎಂದು ಎಲ್ಲೂ

ಮುಗಿಯಬಾರದೆಂದು ಅನಿಸಿದೆ

ಕನಸೇ ನೀ ಬಾ ನನ್ನ

ಹೃದಯ ತುಂಬಿಕೋ

ಸೊಗಸೇ ನೀ ಬಾ ನನ್ನ

ಬದುಕ ಸೇರಿಕೋ

ನನ್ನ ನಾನೇ ಮರೆವಂತೆ ಮಾಡೋ

ನಿನದೆಂತ ಮೋಡಿ

ನನ್ನ ತುಂಬ ನೀನೇ ಓಹೋ

ಮೌನಿ ನಾನು ನುಡಿವಾಗ ನೀನು

ಧ್ಯಾನಿ ನಾನು ನನ್ನ ದೇವಿ ನೀನು

ಮೋಹಕ ನಗು ಮನಸೊಂತರ ಮಗು

ಬದಲಾದೆ ನಾನು ಬಂದಮೇಲೆ ನೀನು

ಸ್ನೇಹಿತೇನೋ ದೇವತೆನೋ ತಿಳಿಯೆನು

ನನ್ನ ನಿನ್ನ ಬಂಧವೇನೋ

ಅರಿಯೆನು ಓಹೋ

ಹ್ಮ್ಮ್ ಹ್ಮ್ಮ್ ಹ್ಮ್ಮ್ಮ್ ಹ್ಮ್ಮ್ಮ್

ಹ್ಮ್ಮ್ಮ್ ಹ್ಮ್ಮ್ ಹ್ಮ್ಮ್ ಹ್ಮ್ಮ್

ಧ್ಯಾನಿ ನಾನು ನನ್ನ ದೇವಿ ನೀನು

 

Leave a Reply

Your email address will not be published. Required fields are marked *