ಮುತ್ತಿನ ಮೂಗುತಿ ಇಟ್ಟು – Muttina mooguti Ittu Song Lyrics – Mister Raja Kannada Movie


ಚಿತ್ರ : ಮಿಸ್ಟರ್ ರಾಜ
ಗಾಯನ: SPB & ವಾಣಿ ಜಯರಾಂ
ಸಂಗೀತ : ಹಂಸಲೇಖ
ಸಾಹಿತ್ಯ : ಹಂಸಲೇಖ


ಲಲಲಲಲಲಲಲ
ಲಲಲಾಲಲಲಲಲ

ಮುತ್ತಿನ ಮೂಗುತಿ ಇಟ್ಟು

ನೆತ್ತಿಗೆ ಕುಂಕುಮವಿಟ್ಟು
ನಾಚಿ ನಾಚಿ ಬಂದ ಹೆಣ್ಣೇ
ಕಣ್ಣಿಗೆ ಕಾಡಿಗೆಯನಿಟ್ಟು
ಕೆನ್ನೆಗೆ ಚುಕ್ಕಿಯನಿಟ್ಟು
ಮೋಹ ತೋರಿನಿಂತ ಹೆಣ್ಣೇ
ಸೀರೆ ಕೊಟ್ಟ ಧೀರ
ಮನಸನ್ನಿಲ್ಲಿ ತಾರಾ
ಹೇಹೇಹೇ
ನನ್ನ ಕದ್ದ ಚೋರ
ಬಾರೋ ಜೋಕುಮಾರ
ನೀನು ಉಟ್ಟಸೀರೆ
ತುಂಬಾ ಚಂದ ಬಾರೇ
ಹಾಹಾಹಾ

ನನ್ನ ಕದ್ದ ತಾರೆ
ಮನಸು ನೀಡು ಬಾರೆ
ನಿನ್ನ ಕಣ್ಣಲ್ಲಿ ನನ್ನ ಮನಸಿಟ್ಟೆ
ನಿನ್ನ ಪ್ರೀತಿಗೆ ಜೀವ ಪಣವಿಟ್ಟೆ
ಮುತ್ತಿನ ನಿನ್ನ ಮಾತು
ಕೇಳಿ ಕೇಳಿ ಸೋತು
ನಿಲ್ಲಲಾರದಾದೆ ನಾನು
ಉತ್ತರ ದಕ್ಷಿಣವಾಗಿ
ಸ್ವರ್ಗವು ಹತ್ತಿರವಾಗಿ
ತೇಲಿ ತೇಲಿ ಹೋದೆ ನಾನು
♫♫♫♫♫♫♫♫♫♫♫♫


ಸುತ್ತೇಳು ಮಲ್ಲಿಗೆಯೇ
ಬಾರೆ ಸೇರಿಕೋ
ನನ್ನ ಮುತ್ತಿಕೋ
ತೂಗಾಡೋ ಹೂಬಳ್ಳಿಯೇ
ಬಾರೇ ಅಪ್ಪಿಕೋ
ನನ್ನ ಬಳಸಿಕೋ
ನಿನ್ನ ಸೇರದಾದರೆ
ಜೀವವೇಕೆ ಬಾ ದೊರೆ
ಬಳ್ಳಿಗೆಂದು ಆಸರೆ ನೀನೆ
ತಾನೇ ದೇವರೇ
ದಿನವು ನಿನ್ನದೇ

ಚಿಂತೆ ಚಿಂತೆ ಚಿಂತೆ
ಅದುವೇನನ್ನ ಭಾಗ್ಯವಂತೆ
ದಿನವು ನಿನ್ನದೇ

ಚಿಂತೆ ಚಿಂತೆ ಚಿಂತೆ
ಅದುವೇನನ್ನ ಭಾಗ್ಯವಂತೆ

ಸೀರೆ ಕೊಟ್ಟ ಧೀರ
ಮನಸನ್ನಿಲ್ಲಿ ತಾರಾ
ಹೇಹೇಹೇ
ನನ್ನ ಕದ್ದ ಚೋರ
ಬಾರೋ ಜೋಕುಮಾರ

ಹಾ ಹಾ ಹಾ
♫♫♫♫♫♫♫♫♫♫♫♫


:ಲಾಲಲಾಲಲಾಲಲಾಲಲಾ
ಲಾಲಲಾಲಲಾಲಲಾಲಲಾ
ಆಸೆಯ ಗೂಡಲ್ಲಿ

ನಾ ಪ್ರೀತಿ ಹಾಸಿಗೆ
ಮೇಲೆ ಮಲ್ಲಿಗೆ
ಹಾಸಿಟ್ಟು ಕಾದಿಹೇನಾ

ನಿನ್ನ ದಾರಿಗೆ
ಬಾರೋ ಮೆಲ್ಲಗೆ
ನಿನ್ನ ಅಂತರಾಳದ

ಜೀವ ನನ್ನದಾಗಿದೆ
ನನ್ನ ಬಾಲಿನಾಳದ

ಆಸೆ ಪೂರ್ಣ ವಾಗಿದೆ
ದಿನವು ನಿನ್ನದೇ

ಚಿಂತೆ ಚಿಂತೆ ಚಿಂತೆ
ನಮಗೆ ಇನ್ನು ಯಾರ ಚಿಂತೆ
ದಿನವು ನಿನ್ನದೇ

ಚಿಂತೆ ಚಿಂತೆ ಚಿಂತೆ
ನಮಗೆ ಇನ್ನು ಯಾರ ಚಿಂತೆ
ಸೀರೆ ಕೊಟ್ಟ ಧೀರ
ಮನಸನ್ನಿಲ್ಲಿ ತಾರಾ
ಹೇಹೇಏ
ನನ್ನ ಕದ್ದ ಚೋರ
ಬಾರೋ ಜೋಕುಮಾರ
ನೀನು ಉಟ್ಟಸೀರೆ
ತುಂಬಾ ಚಂದ ಬಾರೇ

ಆಹಾಹಾ
ನನ್ನ ಕದ್ದ ತಾರೆ
ಮನಸು ನೀಡು ಬಾರೆ
ನಿನ್ನ ಕಣ್ಣಲ್ಲಿ ನನ್ನ ಮನಸಿಟ್ಟೆ
ನಿನ್ನ ಪ್ರೀತಿಗೆ ಜೀವ ಪಣವಿಟ್ಟೆ
ಮುತ್ತಿನ ನಿನ್ನ ಮಾತು
ಕೇಳಿ ಕೇಳಿ ಸೋತು
ನಿಲ್ಲಲಾರದಾದೆ ನಾನು
ಉತ್ತರ ದಕ್ಷಿಣವಾಗಿ
ಸ್ವರ್ಗವು ಹತ್ತಿರವಾಗಿ
ತೇಲಿ ತೇಲಿ ಹೋದೆ ನಾನು

Leave a Reply

Your email address will not be published. Required fields are marked *