ಮುಂಗಾರು ಮಳೆಯೇ – Mungaru maleye Song Lyrics – Mungaru male Lyrics

ಚಿತ್ರ: ಮುಂಗಾರು ಮಳೆ
ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ
ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿಮಳೆಗೆ
ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ
ಯಾವ ಹನಿಯು ಮುತ್ತಾಗುವುದೊ
ಒಲವು ಎಲ್ಲಿ ಕುಡಿಯೊಡೆಯುವುದೋ
ತಿಳಿಯದಾಗಿದೆ
ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ
♫♫♫♫♫ ♫♫♫♫♫ ♫♫♫♫♫
ಭುವಿ ಕೆನ್ನೆ ತುಂಬಾ
ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ
ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು
ಪ್ರೇಮ ನಾದವೊ
ಎದೆ ಮುಗಿಲಿನಲ್ಲಿ
ರಂಗು ಚಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು
ಏನು ಮೋಡಿಯೋ
ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ
♫♫♫♫♫ ♫♫♫♫♫ ♫♫♫♫♫
ಯಾವ ಹನಿಗಳಿಂದ
ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ
ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರು
ಯಾರು ಬರೆದರೋ
ಯಾವ ಪ್ರೀತಿ ಹೂವು
ಯಾರ ಹೃದಯದಲ್ಲರ ಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ
ಯಾರು ಬಲ್ಲರೋ
ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ
♫♫♫♫♫ ♫♫♫♫♫ ♫♫♫♫♫
ಒಲವ ಚಂದಮಾಮ
ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ
ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ
ಪ್ರೀತಿ ಪಯಣವೊ
ಪ್ರಣಯದೂರಿನಲ್ಲಿ
ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು
ಹೊಸ ಜನ್ಮವೂ
ಮುಂಗಾರು ಮಳೆಯೇ..
ಏನು ನಿನ್ನ ಹನಿಗಳ ಲೀಲೆ

Leave a Reply

Your email address will not be published. Required fields are marked *