Song: Maanavanedeyali
Album/Movie: Abhinandana
Singer: Shimoga Subbanna
Music Director: Garthikere Raghanna
Lyricist: N.S. Lakshminarayana Bhatt
Music Label : Lahari Music
ಮಾನವನೆದೆಯಲಿ
ಆರದೆ ಉರಿಯಲಿ
ದೇವರು
ಹಚ್ಚಿದ ದೀಪ
ಮಾನವನೆದೆಯಲಿ
ಆರದೆ ಉರಿಯಲಿ
ದೇವರು
ಹಚ್ಚಿದ ದೀಪ
ರೇಗುವ
ದನಿಗೂ ರಾಗವು ಒಲಿಯಲಿ
ರೇಗುವ
ದನಿಗೂ ರಾಗವು ಒಲಿಯಲಿ
ಮೂಡಲಿ
ಮದುರಾಲಾಪ
ಮಾನವನೆದೆಯಲಿ
ಆರದೆ ಉರಿಯಲಿ
ದೇವರು
ಹಚ್ಚಿದ ದೀಪ
ಕೊಲ್ಲಲು
ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ
ಸವರುವ ಪ್ರೀತಿ
ಕೊಲ್ಲಲು
ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ
ಸವರುವ ಪ್ರೀತಿ
ಇರಿಯುವ
ಮುಳ್ಳಿನ ನಡುವೆಯೇ ನಗುವುದು
ಇರಿಯುವ
ಮುಳ್ಳಿನ ನಡುವೆಯೇ ನಗುವುದು
ಗುಲಾಬಿ
ಹೂವಿನ ಪ್ರೀತಿ
ಮಾನವನೆದೆಯಲಿ
ಆರದೆ ಉರಿಯಲಿ
ದೇವರು
ಹಚ್ಚಿದ ದೀಪ
ಉರಿಯನು
ಕಾರುವ ಆಗಸ ತಾರದೆ
ತಂಪನು
ತೀಡುವ ಮಳೆಯ
ಉರಿಯನು
ಕಾರುವ ಆಗಸ ತಾರದೆ
ತಂಪನು
ತೀಡುವ ಮಳೆಯ
ಲಾವಾ
ರಸವನು ಕಾರುವ ಧರೆಯೆ
ಲಾವಾ
ರಸವನು ಕಾರುವ ಧರೆಯೆ
ನೀಡದೆ
ಅನ್ನದ ಬೆಳೆಯ
ಮಾನವನೆದೆಯಲಿ
ಆರದೆ ಉರಿಯಲಿ
ದೇವರು
ಹಚ್ಚಿದ ದೀಪ
ಹಮ್ಮು
ಬಿಮ್ಮುಗಳ ಮರಳುಗಾಡಿನಲಿ
ಎಲ್ಲೋ
ತಣ್ಣನೆ ಚಿಲುಮೆ
ಹಮ್ಮು
ಬಿಮ್ಮುಗಳ ಮರಳುಗಾಡಿನಲಿ
ಎಲ್ಲೋ
ತಣ್ಣನೆ ಚಿಲುಮೆ
ತಾಪವ
ಹರಿಸಿ ಕಾಪಾಡುವುದು
ತಾಪವ
ಹರಿಸಿ ಕಾಪಾಡುವುದು
ಒಳಗೆ
ಸಣ್ಣಗೆ ಒಲುಮೆ
ಮಾನವನೆದೆಯಲಿ
ಆರದೆ ಉರಿಯಲಿ
ದೇವರು
ಹಚ್ಚಿದ ದೀಪ
ರೇಗುವ
ದನಿಗೂ ರಾಗವು ಒಲಿಯಲಿ
ರೇಗುವ
ದನಿಗೂ ರಾಗವು ಒಲಿಯಲಿ
ಮೂಡಲಿ
ಮದುರಾಲಾಪ
ಮಾನವನೆದೆಯಲಿ
ಆರದೆ ಉರಿಯಲಿ
ದೇವರು
ಹಚ್ಚಿದ ದೀಪ