Song Title: Maley Maley
Movie: Ninna Sanihake
Music Composer: Raghu Dixit
Lyrics – Vasuki Vaibhav
Singer – Raghu Dixit
Music Producer – Nakul Abhyankar
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಹನಿ ಹನಿ ಮೊಳಗಲಿ ನವಿರಾಗುವ ತೀರಕೆ
ಮನಧನಿ ಬಯಸಿದ ಈಡೇರಿಸು ಕೋರಿಕೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಉಸಿರಲಿ ಹರಡಿದೆ ಸುಂದರ ಸಂಕಟ
ಹೆಸರನು ನೆನದರೆ ಜೀವನ ಸಾರ್ಥಕ
ಕಣಗಳ ಹಿಂಬಾಲಿಸು ಹೇಳುವೆ ಕನಸ
ನೀನಿರೆ ನನ್ನ ಜೀವಕೆ ಎಲ್ಲಿದೆ ವಿರಸ
ನಿನ್ನಯ ಮುನಿಸಲ್ಲಿಯೇ ನನ್ನಾಣೆ ನೇಮಿಸು
ನಿನ್ನಯ ಸಂಕೋಚಕೆ ನನ್ನಾಣೆ ಸ್ಮರಿಸು
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಕೊರಳನು ಬಿಗಿಯುವ ನೋವಿದೆ ನನ್ನಲಿ
ಕೇವಲ ಮಾತಲಿ ಹೇಗೆ ನಾ ತುಂಬಲಿ
ನನ್ನಯ ಈ ಕಂಬನಿ ನಿನ್ನದೇ ಕೊಡುಗೆ
ಸೇರಲಿ ಉಸಿರೆಲ್ಲವೂ ಸಾವಿನ ಬಳಿಗೆ
ಕಾಡುವ ಕನಸೆಲ್ಲವೂ ಬರಿ ಮೂಡ ನಂಬಿಕೆ
ಕಾಡುವ ನೆನಪೆಲ್ಲವೂ ಏಕಾಂತದ ಕೋರಿಕೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಹನಿ ಹನಿ ಮೊಳಗಲಿ ನವಿರಾಗುವ ತೀರಕೆ
ಮನಧನಿ ಬಯಸಿದ ಈಡೇರಿಸು ಕೋರಿಕೆ
ಮಳೆ ಮಳೆ ಮಳೆಯೇ ಪ್ರೀತಿಯ ಮಳೆ
ಮಳೆ ಮಳೆ ಮಳೆಯೇ
ಪ್ರೀತಿಯ ಮಳೆ
