ಮಲಗೆ ಮಲಗೆ – Malage malage Lyrics – Ricky Movie lyrics

ಚಿತ್ರ: ರಿಕ್ಕಿ
ನನನ ಹೇ
ನನನ ನನ ರೇ..
ನನನ ಹೇ
ನನನ ನನ ರೇ..
ಮಲಗೆ ಮಲಗೆ ಹೇ ಮಲಗೆ ಮಲಗೆ
ಎದೆಯ ಒಳಗೆ ಎದೆಯ ಒಳಗೆ..
ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಮರುಳ ನಡೆಗೆ
ನೀನು ಕಂಡ ಕನಸಿನ ಮನೆಯಲಿ
ಒಂದು ಕೋಣೆ ನನಗಿರಲಿ
ಸಾವಿರಾರು ಸವಿ ಸವಿ ಬಯಕೆಗೆ
ಹೇಗೆ ನಾನು ವಿವರಣೆ ಬರೆಯಲಿ
ಮಲಗೆ ಮಲಗೆ ಹೇ ಮಲಗೆ ಮಲಗೆ..
ಎದೆಯ ಒಳಗೆ ಎದೆಯ ಒಳಗೆ
♫♫♫♫♫ ♫♫♫♫♫ ♫♫♫♫♫
ನೀ ಇಲ್ಲದಾಗ ನೋವು ಅಪಾರ
ಹೀಗೆಲ್ಲಾ ಪ್ರೀತಿ ಅಲ್ಲ ಸಸಾರ
ನಿನ್ನನು ಕನಸಿನ
ಕಿಂಡಿಯಿಂದಾನೆ ನೋಡುವೆ
ಒಲವನು ಹೃದಯದ
ಹುಂಡಿಯಿಂದಾನೆ ದೋಚುವೆ
ನೀನು ಎಂಬ ಒಲವಿನ ಒಗಟನು
ಎಷ್ಟು ಅಂತ ಬಿಡಿಸುತ ಅಲೆಯಲಿ
ಮಲಗೆ ಮಲಗೆ ಹೇ ಮಲಗೆ ಮಲಗೆ
ಎದೆಯ ಒಳಗೆ ಎದೆಯ ಒಳಗೆ
♫♫♫♫♫ ♫♫♫♫♫ ♫♫♫♫♫
ನಿನ್ನ ಹಿತಾನೆ ನನ್ನ ಇರಾದೆ
ನಿನ್ನೊಂದಿಗೇನೆ ಎಲ್ಲ ತಗಾದೆ
ಕನಸಲಿ ಕೆಣಕುವೆ
ಬೇಕುಬೇಕಂತ ನನ್ನನೇ
ಲೋಕದ ನಿಯಮಕೆ
ದೂರದಿಂದಾನೆ ವಂದನೆ
ಹೀಗೆ ಬಂದು ಹಾಗೆ ಹೋದರೆ
ಹೇಗೆ ನಾನು ವಿರಹವ ಸಹಿಸಲಿ
ಮಲಗೆ ಮಲಗೆ ಹೇ ಮಲಗೆ ಮಲಗೆ
ಎದೆಯ ಒಳಗೆ ಎದೆಯ ಒಳಗೆ
ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಮರುಳ ನಡೆಗೆ

Malage malage Edeya olage Lyrics in Kannada

Leave a Reply

Your email address will not be published. Required fields are marked *