ಮನಸೇ ಕರಗದ ಲೋಕವೇ ಲೋಕವು
ಮನಸೇ ಕರಗದ ಲೋಕವೇ ಲೋಕವು
ಗುಡಿಸಿಲೊಳಗಡೆ ನಮ್ಮ ಬದುಕೆ ಮುಗಿವುದೆ
ನಾ ಮತ್ತೆ ಹಾರುವಾ
ಕಿರು ಆಸೆ
ಮೂಡಿದೆ
ಬೆಳಕು ಹರಿದಿದೆ
ಬಾನು ಮೈಯಾ ಮುರಿದಿದೆ
ಈಗ ರೆಕ್ಕೆ ಹಾರದೆ
ಕೊನೆ ಕದವು ತೆರೆಯದೆ
ಪುಟ್ಟ ಪುಟ್ಟ ಗುಂಡಿಗೇಲಿ
ಉಸಿರೇ ನಿಂತು ಹೋಗೈತೆ
ಮನೆಯು ಮಸಣವು
ಎರಡು ಒಂದೇ ಆಗೈತೆ
ಕಣ್ಣೀರುಕ್ಕಿ ಬಂದರೆ
ನೀನೆ ಒರೆಸಿಕೊ ಇಲ್ಲಿ
ಅಪ್ಪ ಅಮ್ಮ ಯಾರು ಇಲ್ಲ ನೋವ ನುಂಗಿಕೊ
ಹೋದರೆ ಹೋಗಲಿ
ಸಾಯೋ ಬದುಕು ನಮದು
ಕಿವಿಗೆ ಬೀಳಲಿ ಕಿರುಚಾಟವು ಎಂದು
ಹೋದರೆ ಹೋಗಲಿ ಸಾಯೋ ಬದುಕು ನಮದು
ಏಳಿಗೆ ಆಗದು ನಮ್ಮ ಬದುಕಿದು ಎಂದು
ಮನಸೇ ಕರಗದ ಲೋಕವೇ ಲೋಕವು
ಮನಸೇ ಕರಗದ ಲೋಕವೇ ಲೋಕವು