ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಾಗೆ ಜಿನುಗಿ ಜಿನುಗಿ
ಹೋ ಜುಳುಜುಳು ಹರಿಯುವ ನದಿಯಲಿ
ಕಿಲಕಿಲ ಕುಣಿಯುವ ಗಿಳಿಯಲಿ
ಹೋ ಜುಳುಜುಳು ಹರಿಯುವ ನದಿಯಲಿ
ಕಿಲಕಿಲ ಕುಣಿಯುವ ಗಿಳಿಯಲಿ
ಪ್ರೀತಿ.. ಮಾತನೇ..
ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಾಗೆ ಜಿನುಗಿ ಜಿನುಗಿ
ಚಿಲಿಪಿಲಿ ಹಾಡೋ ಮೈನಾ
ಪ್ರೆಮದರ್ಥ ಗೊತ್ತೇ ನಿನಗೆ
ತುಡಿವ ಮಿಡಿವ ಜೀವ ಒಳಗೆ
ತುಡಿವ ಮಿಡಿವ ಜೀವ ಒಳಗೆ
ತುಂತುಂ ಎಂದು ಹಾಡುವ ದುಂಬಿ
ಪ್ರೀತಿ ರೀತಿ ಗೊತ್ತೇ ನಿನಗೆ
ಕೂಗಿ ಕರೆವ ಭಾವ ಒಳಗೆ
ಕೂಗಿ ಕರೆವ ಭಾವ ಒಳಗೆ
ಊರಾಗೆ ನೆಲಕೆ ಹಸಿರ
ನೆಡೆ ಕೂಗದೋ ಗಿಡಮರ ಪ್ರೀತಿ
ಭೋಲಾದ ಮರಕೆ ಚಿಗುರ
ತಂದು ಒಲಾಡೊ ಎಲೆ ಎಲೆ ಪ್ರೀತಿ
ಇತ್ತ ಮಳೆ ಮಳೆ ಯಲ್ಲಿ
ಅತ್ತ ನೆಲೆ ನೆಲೆ ಯಲ್ಲಿ
ಸುಂದರ ಸುಂದರ ಸೆಲೆ
ಹಂದರ ಹಂದರ ಭಲೇ
ಎಂದು ಪ್ರೀತಿ ತಂದಾಗ
ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಾಗೆ ಜಿನುಗಿ ಜಿನುಗಿ
ಹೋ ಜುಳುಜುಳು ಹರಿಯುವ ನದಿಯಲಿ
ಕಿಲಕಿಲ ಕುಣಿಯುವ ಗಿಳಿಯಲಿ
ಹೋ ಲಲಲ.. ಲಲಲ..
ಪ್ರೀತಿ.. ಮಾತನೆ..
ಮನದಾಸೆ ಹಕ್ಕಿಯಾಗಿ ಮುಗಿಲಾಗಿ ತೇಲಿ ತೇಲಿ
ಬನದಾಗೆ ಸುತ್ತಿ ಸುರಿದು ಬಯಲಾಗೆ ಜಿನುಕಿ ಜಿನುಕಿ
ಪ್ರೇಮಿ ಅವಳ ಕಾಣದ ಇರುಳು
ಪ್ರೀತಿ ನೋವು ತಂದೆ ತಹುದು
ಪ್ರೇಮ ರೋಗ ಬಂದೆ ಬಹುದು
ಪ್ರೇಮ ರೋಗ ಬಂದೆ ಬಹುದು
ಪ್ರೇಮ ರೋಗ ಬಿಡದೆ ಬರಲು
ಪ್ರೇಮಿ ಹೃದಯ ಸುಡದೆ ಇರದು
ಸುಡುವ ಎದೆಗೆ ಪ್ರೇಮವೇ ಮದ್ದು
ಸುಡುವ ಎದೆಗೆ ಪ್ರೇಮವೇ ಮದ್ದು
ಸಂತೋಷ ತಂದೆ ಪ್ರೀತಿ
ಎಂದು ನೋವೆಲ್ಲಾ ಮುಳುಗಿ ಸಾಗಿ
ಸಂಗಾತಿ ಕಂಡ ಪ್ರೀತಿ
ನಿತ್ಯ ಬಾಳಲ್ಲಿ ಬೆಂದು ಹೋಗಿ
ತಂದನಾನ ರಂಗಿ ನಂಗಿ
ಮಣ್ಣ ಅಂದ ಚಂದ ರಂಗಿ
ಚಂದನ ಚಂದನ ಸಿರಿ
ಚುಂಬನ ಚುಂಬನ ಸವಿ
ಮನದಾಸೆ ಹಕ್ಕಿಯಾಗಿ ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಬಾನು ಬೀಗಿ
ಓ ಕನಸಲಿ ಮನಸಲಿ ಅಲೆಯುತಾ
ನೋವಲಿ ನಲಿವಲಿ ಕಲಿಯುತ
ಕನಸಲಿ ಮನಸಲಿ ಅಲೆಯುತಾ
ನೋವಲಿ ನಲಿವಲಿ ಕಲಿಯುತ
ಏನೋ.. ಅರಿಯನೇ..
ಮನದಾಸೆ ಹಕ್ಕಿಯಾಗಿ ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ ಅನುರಾಗ ಬಾನು ಬೀಗಿ