ಮಂಡ್ಯದ ಗಂಡು – Mandyada gandu Song Lyrics in Kannada – Mandyada gandu kannada Movie

ಚಿತ್ರ: ಮಂಡ್ಯದ ಗಂಡು


Mini Bank Business | AEPS | Money Transfer

ಹೇ…. ಹೇ ಹೇ ಹೇಹೇ…
ಹೇಹೇ…. ಹೇ ಹೇ ಹೇ ಹೇ
ಕಾವೇರಿ ನೀರನು ಕುಡಿದು
ಕಬ್ಬಿನ ಹಾಲಲಿ ಬೆಳೆದು
ಕಾವೇರಿ ನೀರನು ಕುಡಿದು
ಕಬ್ಬಿನ ಹಾಲಲಿ ಬೆಳೆದು
ಕನ್ನಡ ನುಡಿಯನು ನುಡಿದು
ಈ ಮಣ್ಣಲಿ ಮುತ್ತನು ತೆಗೆವ ಗಂಡು…
ಈ ಮಂಡ್ಯದ ಗಂಡು
ಮುತ್ತಿನ ಚಂಡು
ನಾನ್ ನಿಮ್ಮೂರ ಬಂಧು
ನಿಮ್ಮ ಮರೆಯಲ್ಲ ಎಂದು
Mini Bank Business | AEPS | Money Transfer
♫♫♫♫♫♫♫♫♫♫♫♫

321

ಹರಿಯುವ ಕಾವೇರಿಯು
ಭೂಮಿಗೆ ತಾ ಪ್ರಾಣವು
ಬೆಳೆದಿಹ ಈ ಪೈರಿದು
ರೈತರ ಸೌಭಾಗ್ಯವು
ಕಬ್ಬಿನಲ್ಲಿ ಸಕ್ಕರೆ
ನಮ್ಮ ನಿಮ್ಮ ಅಕ್ಕರೆ
ಬಂದರೇನು ತೊಂದರೆ
ನಾವು ಜೊತೆ ನಿಂತರೆ
ಸೇರಿ ಹೋರಾಡುವಾ
ಆ…..ಆ………
ಕನ್ನಡ ನಾಡೆಂದರೆ
ಸ್ನೇಹದ ತವರೂರಿದು
ಭಾಷೆಯ ಕಾಪಾಡುವ
ವೀರರ ತಾಯ್ನಾಡಿದು
ಪ್ರೀತಿ ಇಲ್ಲಿ ಭಾಷೆಯು
ನೀತಿ ಇಲ್ಲಿ ದೈವವು
ರೀತಿ ನೀತಿ ಮೀರಲು
ಕೈಯ್ಯ ಕಟ್ಟಿ ನಿಲ್ಲೆವು
ಸೇರಿ ಹೋರಾಡುವಾ…
ಈ ಮಂಡ್ಯದ ಗಂಡು
ಮುತ್ತಿನ ಚಂಡು
ನಾ ನಿಮ್ಮೂರ ಬಂಧು
ನಿಮ್ಮ ಮರೆಯಲ್ಲ ಎಂದು
♫♫♫♫♫♫♫♫♫♫♫♫

Mini Bank Business | AEPS | Money Transfer
ಹೂಮಾಲೆಯು ನಿನಗಾಗಿಯೇ
ಈ ಬಾಳೆಯು ನಿನಗಾಗಿಯೆ
ಬೆಡಗಿನ ಶೃಂಗಾರವು
ಮಾವನೆ ನಿನಗಾಗಿಯೇ
ಆಸೆ ಬರೋ ವಯಸು
ಪ್ರೀತಿ ಇರೊ ಮನಸು
ಕಣ್ಣತುಂಬ ಕನಸು
ನಿನ್ನ ಜೊತೆ ಸೊಗಸು
ಬಳಿಗೆ ನೀ ಬಾರೆಯಾ….
321
ಅಂದದ ಅಪರಂಜಿಯೇ
ಗಡಿಬಿಡಿ ಗೌರಮ್ಮನೆ
ನಿನ್ನ ಪ್ರೀತಿಯ ಈ ಆಟಕೆ
ಅವಸರ ಈಗೇತಕೆ
ಮಾವನನ್ನು ಕಂಡು ನೀ
ಕುಣಿಬೇಡ ಧಿಮ್ಮನೆ
ಊರಿನೋರ ಮೆಚ್ಚುಗೆ
ಬೇಕು ನಮಗೆ ಬೆಚ್ಚಗೆ
ಚೆಲುವೆ ಬಿಡು ದಾರಿಯಾ…..
ಕಾವೇರಿ ನೀರನು ಕುಡಿದು
ಕಬ್ಬಿನ ಹಾಲಲಿ ಬೆಳೆದು
ಕನ್ನಡ ನುಡಿಯನು ನುಡಿದು
ಈ ಮಣ್ಣಲಿ ಮುತ್ತನು ತೆಗೆವ ಗಂಡು
ಈ ಮಂಡ್ಯದ ಗಂಡು
ಮುತ್ತಿನ ಚಂಡು
ನಾನ್ ನಿಮ್ಮೂರ ಬಂಧು
ನಿಮ್ಮ ಮರೆಯಲ್ಲ ಎಂದು


Mini Bank Business | AEPS | Money Transfer

Leave a Reply

Your email address will not be published. Required fields are marked *