ಭಾಗ್ಯಾ ಎನ್ನಲೇ – Bhagya ennale Punya ennale Lyrics in Kannada – Apoorva sangama


ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು
ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ

ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು
ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ….

ಭಾಗ್ಯಾ ಎನ್ನಲೇ
ಪುಣ್ಯಾ ಎನ್ನಲೇ
♫♫♫♫♫♫♫♫♫♫♫♫♫♫

ಕತ್ತಲಿನಲ್ಲಿ ನಾನಿರುವಾಗ
ಜ್ಯೋತಿಯ ಹಾಗೆ ನೀ ಬಂದೆ
ಕತ್ತಲಿನಲ್ಲಿ ನಾನಿರುವಾಗ
ಜ್ಯೋತಿಯ ಹಾಗೆ ನೀ ಬಂದೆ
ಬಾಳಲಿ ಇಂದು ಮೊದಲನೆ ಬಾರಿ
ಸೋದರ ಪ್ರೇಮವ ನಾ ಕಂಡೆ
.. ಅಣ್ಣಾ ನಿನ್ನ ಮಾತು
ಮುತ್ತೂ ಕಡಲ ಮುತ್ತೂ
ಕೈ ಜಾರಿ ಹೋದ ಮುತ್ತೊಂದು ಮತ್ತೆ
ತಾನಾಗಿ ಕೈ ಸೇರಿದೇ…..
ಭಾಗ್ಯಾ ಎನ್ನಲೇ
ಪುಣ್ಯಾ ಎನ್ನಲೇ
♫♫♫♫♫♫♫♫♫♫♫♫♫♫

ಅಣ್ಣನೆ ನಿನ್ನಾ ನೋಡಿದ ಮೇಲೆ
ಅಮ್ಮನ ಕಾಣೋ ಆಸೆ
ಅಣ್ಣನೆ ನಿನ್ನಾ ನೋಡಿದ ಮೇಲೆ
ಅಮ್ಮನ ಕಾಣೋ ಆಸೆ
ನನ್ನವರೊಡನೆ ಒಂದಾಗಿ ಮುಂದೆ
ಬಾಳೋಣ ಎನ್ನುವ ಆಸೆ
.. ಚಿಂತೇ ಏಕೆ ಇನ್ನೂ

ನಾನೂ ಇಲ್ಲವೇನೂ

ಸಿಡಿಲಂತೆ ಬಿದ್ದು ಕೋಟೆ ಒಡೆದೂ

ಹಾರೋಣ ಆಕಾಶಕೇ….
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು

ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ

ಜೊತೆಯಾಗಿ ನಾನು ಬರುವೇ….
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ

ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ

Leave a Reply

Your email address will not be published. Required fields are marked *