ಬೊಂಬೆ ಆಡ್ಸೋನು – Bombe adsonu Lyrics – Drama Movie Lyrics

ಚಿತ್ರ: ಡ್ರಾಮಾ
ಸಂಗೀತ: ವಿ. ಹರಿಕೃಷ್ಣ

ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮಗೆ ಯಾಕೆ ಟೆನ್ಷನ್ನು
ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮಗೆ ಯಾಕೆ ಟೆನ್ಷನ್ನು
ಲಗಾಮು ದೇವರ ಕೈಲಿ
ನಾವೇನ್ ಮಾಡಾಣ
ಎಲ್ಲಾರು ಮುಖ ಮುಚ್ಕೊಂಡು ಡ್ರಾಮಾ ಆಡಾಣ



ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮಗೆ ಯಾಕೆ ಟೆನ್ಷನ್ನು
♫♫♫♫♫ ♫♫♫♫♫ ♫♫♫♫♫

ಇಡ್ಲಿಗೆ ತುದಿ ಯಾವ್ದು
ಮುದ್ದೆಗೆ ಬುಡ ಯಾವ್ದು
ಗುಂಡೀಲಿ ಹೆಣ ಯಾವ್ದು
ಹುಂಡೀಲಿ ಹಣ ಯಾವ್ದು



ಪ್ರೇಮ ಕೇಸರಿ ಬಾತು
ಕಾಮ ಖಾರ ಬಾತು
ಜೀವನ ಚೌ ಚೌ ಆಯ್ತು
ಯಾಕೆ ದೂಸ್ರಾ ಮಾತು



ಉಪ್ಪನ್ನು ತಿಂದ ಮೇಲೆ
ಬಿಪಿ ಬರ್ದೇ ಇರ್ತದ
ಉಪ್ಪಿನಕಾಯಿ ಅಂತ ಲೈಫು
ತಿನ್ನದೇ ಇರೋಕಾಯ್ತದ
ನಾಲಗೇನೆ ನಮ್ ಕೈಲಿಲ್ಲ
ನಾವೇನ್ ಮಾಡಾಣ
ಅವ್ನು ಬರ್ಕೊಟ್ಟ ಡೈಲಾಗ್ ಹೇಳಿ
ಡ್ರಾಮಾ ಆಡಾಣ

ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮಗೆ ಯಾಕೆ ಟೆನ್ಷನ್ನು
♫♫♫♫♫ ♫♫♫♫♫ ♫♫♫♫♫

ಒಂದೊಂದು ಮುಸುಡೀಲು
ನೂರೆಂಟು ಕಲರ್ರು
ಇಲ್ಲೊಬ್ಬ ಸೂಪರ್ರು
ಅಲ್ಲೊಬ್ಬ ಲೋಫರ್ರು



ಲೋಕದ ಮೆಟಾಡೋರ ಓಡಿಸುತ್ತಾ ದೇವ್ರು
ಸುಸ್ತಾಗಿ ಮಲ್ಗವ್ನೆ
ಯಾರಪ್ಪ ಎಬ್ಸೋರು
ಯಾವನೋ ಬಿಟ್ಟು ಹೋದ
ಹಳೇ ಚಪ್ಪಲಿ ಬಾಳು
ಹಾಕ್ಕೊಂಡು ಹೋಗು ಮಗನೇ
ನಿಲ್ಲಬೇಡ ನೀನೆಲ್ಲೂ
ಭಗವಂತ ರೋಡಲ್ ಸಿಕ್ರೆ ನಾವೇನ್ ಮಾಡಾಣ
ಅವನಿಗೂ ಬಣ್ಣ ಹಚ್ಚಿ ಡ್ರಾಮಾ ಆಡಾಣ

ಬೊಂಬೆ ಆಡ್ಸೋನು ಮೇಲೆ ಕುಂತವ್ನು..
ನಮ್ಗೆ ನಿಮಗೆ ಯಾಕೆ ಟೆನ್ಷನ್ನು
ಬೊಂಬೆ ಆಡ್ಸೋನು ಮೇಲೆ ಕುಂತವ್ನು
ನಮ್ಗೆ ನಿಮಗೆ ಯಾಕೆ ಟೆನ್ಷನ್ನು


ದೇಹಾನೆ ಟೆಂಪರ್ವರಿ ನಾವೇನ್ ಮಾಡಾಣ
ಮಣ್ಣಲ್ಲಿ ಹೋಗೋಗಂಟ ಡ್ರಾಮ ಆಡಾಣ

Bombe adsavnu Lyrics
Gombe adsonu Lyrics 

Leave a Reply

Your email address will not be published. Required fields are marked *