ಚಿತ್ರ : ವಸಂತ ಲಕ್ಷ್ಮೀ
ಗಾಯಕರು : ಎಸ್.ಪಿ.ಬಿ & ವಾಣಿಜಯರಾಮ್
ಬೆಳ್ಳಿ ಮೋಡವೆ ಎಲ್ಲಿ ಓಡುವೇ
ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲನ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ
ಬೆಳ್ಳಿ ಮೊಡವೆ ಎಲ್ಲಿ ಓಡುವೇ
ನನ್ನ ಬಳಿಗೆ ನಲಿದು ಬಾ..
ನನ್ನ ನಲ್ಲೆಯ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ….
ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ತಂಗಾಳಿ ಮೈ ಸೋಕಿ ನಡುಗುತಲಿರುವೆ
ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ಮೋಹದ ಮೋಡಿಗೆ ಸಿಲುಕಿರುವೆ
ತೀರದ ದಾಹದಿ ಬಳಲಿರುವೆ…
ಬಾ… ಇನಿಯಾ ಬಾ… ಸನಿಹಾ
ಎಂದೆನ್ನ ಮನನೊಂದು ಕೂಗಾಡಿದೆ
ಬೆಳ್ಳಿ ಮೊಡವೆ ಎಲ್ಲಿ ಓಡುವೇ
ನನ್ನ ಬಳಿಗೆ ನಲಿದು ಬಾ…ಆಆ
ನನ್ನ ನಲ್ಲನ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ…ಆಆ
ದಿನವೊಂದು ಯುಗವಾಗಿ ಉರುಳುತಲಿರಲು
ಬಾಳೆಲ್ಲ ಬರಡಾಗಿ ಕಳೆಯುತಲಿರಲು
ದಿನವೊಂದು ಯುಗವಾಗಿ ಉರುಳುತಲಿರಲು
ಬಾಳೆಲ್ಲ ಬರಡಾಗಿ ಕಳೆಯುತಲಿರಲು
ಜೀವನ ನೀರಸ ಎನಿಸಿರಲು
ಬೇಸರ ತುಂಬುತ ದಣಿದಿರಲು
ನೀ.. ಬರಲೂ ಈಈಈ ಇರುಳು
ಆನಂದ ನಮಗೆಂದು ಮನ ಹೇಳಿದೆ
ಬೆಳ್ಳಿ ಮೊಡವೆ ಎಲ್ಲಿ ಓಡುವೇ
ನನ್ನ ಬಳಿಗೆ ನಲಿದು ಬಾ.
ನನ್ನ ನಲ್ಲೆಯ ಕಂಡು ಈ ಕ್ಷಣ
ನನ್ನ ಒಲವ ತಿಳಿಸಿ ಬಾ….