ಬೆಳುವಲದ ಮಡಿಲಲ್ಲಿ – Beluvalada madilalli Tittle song Lyrics in Kannada – Beluvalada Madilalli Kannada Movie

ಚಿತ್ರ: ಬೆಳುವಲದ ಮಡಿಲಲ್ಲಿ

ಗಾಯನ: ಎಸ್.ಪಿ.ಬಿ & ಎಸ್.ಜಾನಕಿ

ಬೆಳುವಲದ ಮಡಿಲಲ್ಲಿ
ಮಡಿಲಲ್ಲಿ ಮಡಿಲಲ್ಲಿ
ಬೆವರ ಹನಿ ಬಿದ್ದಾಗ
ಬೆಳುವಲದ ಮಡಿಲಲ್ಲಿ
ಬೆವರ ಹನಿ ಬಿದ್ದಾಗ
ಬೆಳುವಲದ ಮಡಿಲಲ್ಲಿ
ಬೆವರ ಹನಿ ಬಿದ್ದಾಗ
ಒಂದೊಂದು ಬೆವರ ಹನಿ
ಮುತ್ತಾಯ್ತದೊ
ರಾಗಿಯ ಜ್ವಾಳದ ತೆನೆಯಾಯ್ತದೊ

ಒಂದೊಂದು ಬೆವರ ಹನಿ

ಮುತ್ತಾಯ್ತದೊ
ಎಲ್ಲಾರ ಅನ್ನದ ತುತ್ತಾಯ್ತದೋ
ಬೆಳುವಲದ ಮಡಿಲಲ್ಲಿ
ಬೆವರ ಹನಿ ಬಿದ್ದಾಗ…..
♫♫♫♫♫♫♫♫♫♫♫♫

ದುಡಿಮೇಲಿ
ಯಾವತ್ತು ಇಡಬೇಕು ಭಕ್ತಿ
ಬಡತನವ ಓಡ್ಸೋಕೆ
ಅದು ಒಂದೇ ಯುಕ್ತಿ
ದುಡಿಯೋರೆ ನಾಡಿನ
ದುಡಿಯೋರೆ ನಾಡಿನ
ಬಲು ದೊಡ್ಡ ಶಕ್ತಿ
ಬೆಳೆಯೋರ ಕೈಗಳೇ
ದೇಶಕ್ಕೆ ಆಸ್ತಿ
ನಮ್ಮ ಶಕ್ತೀಲಿ
ನಂಬಿಕೆ ಇಟ್ಟಾಗ
ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
ನಾವ್ಕಾಣೊ ಕಸವೆಲ್ಲ ರಸವಾಯ್ತದೊ
ನಾವ ಕಂಡ ಕನಸೆಲ್ಲ ನನಸಾಯ್ತದೊ
ಬೆಳುವಲದ ಮಡಿಲಲ್ಲಿ
ಬೆಳುವಲದ ಮಡಿಲಲ್ಲಿ
ಬೆವರ ಹನಿ ಬಿದ್ದಾಗ
ಬೆವರ ಹನಿ ಬಿದ್ದಾಗ
ಹಾ..
ಹಾಹಾ ಹಾಹಾ ಹಾಹಾ
ಹಾ..
ಹಾ..
ಹಾ..
ಹಾ..
♫♫♫♫♫♫♫♫♫♫♫♫

ಉಳುವೋನೆ ಲೋಕಕ್ಕೆ
ಬೇಕಾದ ಗೆಳೆಯ
ಹಳ್ಳಿಗೂ ಡಿಲ್ಲಿಗೂ
ಕೊಡ್ತಾನೆ ಬೆಳೆಯ..
ಭೂತಾಯಿ ಬಂಟ…...ಆಆ
ಭೂತಾಯಿ ಬಂಟ ನೇಗಿಲನೆಂಟ
ಇವ್ನಿಂದ್ಲೆ ಅಳಿಯೋದು
ಹಸಿವಿನಾ ಸಂಕ್ಟಾ
ಬಂಟ ದುಡಿದಾಗ
ಭೂದೇವಿ ನಗ್ತಾಳೆ
ಬಂಟ ದುಡಿದಾಗ
ಭೂದೇವಿ ನಗ್ತಾಳೆ
ಆವಾಗ್ಲೆ ನೆಲವೆಲ್ಲ ಹಸಿರಾಯ್ತದೊ
ಎಲ್ಲಾರ ಬಾಳಿನ ಉಸಿರಾಯ್ತದೊ
ಬೆಳುವಲದ ಮಡಿಲಲ್ಲಿ
ಬೆವರ ಹನಿ ಬಿದ್ದಾಗ
ಒಂದೊಂದು ಬೆವರ ಹನಿ
ಮುತ್ತಾಯ್ತದೊ
ರಾಗಿಯ ಜ್ವಾಳದ ತೆನೆಯಾಯ್ತದೊ
ಒಂದೊಂದು ಬೆವರ ಹನಿ
ಮುತ್ತಾಯ್ತದೊ
ಎಲ್ಲಾರ ಅನ್ನದ ತುತ್ತಾಯ್ತದೋ

Leave a Reply

Your email address will not be published. Required fields are marked *