ಸಾಹಿತ್ಯ: ಚಿ. ಉದಯಶಂಕರ
ಗಾಯನ: ಡಾ. ರಾಜ್ ಕುಮಾರ್
ಬೃಂದಾವನದಲಿ
ಯೋಗನಿದ್ರೆಯಲಿ
ಇರುವಾ ಗುರುರಾಯ
ಬೆಳ್ಳಿ ಮೂಡುತಿದೆ ಬಾನು ಹೊಳೆಯುತಿದೆ
ಏಳೂ ಮಹನೀಯ
ಕಣ್ತೆರೆದು ಏಳೂ ಗುರುರಾಯ
ಬೃಂದಾವನದಲಿ
ಯೋಗನಿದ್ರೆಯಲಿ
ಇರುವಾ ಗುರುರಾಯ
ಬೆಳ್ಳಿ ಮೂಡುತಿದೆ ಬಾನು ಹೊಳೆಯುತಿದೆ
ಏಳೂ ಮಹನೀಯ
ಕಣ್ತೆರೆದು ಏಳೂ ಗುರುರಾಯ
ಬೃಂದಾವನದಲಿ
ಯೋಗನಿದ್ರೆಯಲಿ
ಇರುವಾ ಗುರುರಾಯ
ಹೊನ್ನ ತೇರಿನಲಿ ಕುಳಿತು ಬಾನಿನಲಿ
ಸೂರ್ಯನು ಬರುತಿರುವ
ಸೂರ್ಯನು ಬರುತಿರುವ
ಕೋಟಿ ಸೂರ್ಯರ ಕಾಂತಿ
ತುಂಬಿರುವ
ನಿನ್ನ ಕಾಣಲಿರುವ…
ನಿನ್ನ ಕಾಣಲಿರುವ
ಗುರುವೇ ತೋರು ನಿನ್ನ ಮೊಗವ
ಬೃಂದಾವನದಲಿ
ಯೋಗನಿದ್ರೆಯಲಿ
ಇರುವಾ ಗುರುರಾಯ
ತುಂಗೆ ಬಂದಿಹಳು ಗಂಗೆ ತಂದಿಹಳು
ಪಾದವಾ ತೊಳೆಯುವಳು
ಪಾದವಾ ತೊಳೆಯುವಳು
ನಿನ್ನ ಪೂಜಿಸಲು ಚರಣ ಸೇವಿಸಲು
ಅರಳಿವೇ ಕಮಲಗಳು
ಅರಳಿವೇ ಕಮಲಗಳು
ಮಂತ್ರವ ಹೇಳಿವೇ
ಭ್ರಮರಗಳು
ಬೃಂದಾವನದಲಿ
ಯೋಗನಿದ್ರೆಯಲಿ
ಇರುವಾ ಗುರುರಾಯ
ಉದಯರಾಗವನು ಉಷೆಯು
ಹಾಡುವಳು
ಆರತಿ ಬೆಳಗುವಳು
ಆರತಿ ಬೆಳಗುವಳು
ನಿನ್ನ ಕಣ್ಣುಗಳ ಬೆಳಕು ಬೀಳದೆ
ಬೆಳಗದೆಮ್ಮ ಬಾಳು
ಬೆಳಗದೆಮ್ಮ ಬಾಳು
ಗುರುವೇ ರಾಘವೇಂದ್ರ ಏಳು
ಬೃಂದಾವನದಲಿ
ಯೋಗನಿದ್ರೆಯಲಿ
ಇರುವಾ ಗುರುರಾಯ
ಬೆಳ್ಳಿ ಮೂಡುತಿದೆ ಬಾನು ಹೊಳೆಯುತಿದೆ
ಏಳೂ ಮಹನೀಯ