Song : Baalu Moore Dina
Singer : Ananya Bhat
Lyrics : Nagathihalli Chandrashekhar
Music : Mano Murthy
Movie : Olave Jeevana Lekkachara
Director : Nagathihalli Chandrashekhar
Starring : Srinagar Kitty, Radhika Pandit
Music Label : Jhankar Music
ಬಾಳು
ಮೂರೇ ದಿನ ಬಾಳ ಜೋಪಾನ
ಬಾಳ
ಮೆರಿಬೇಡ ಬೀಳ್ತಿ ಕಣಣ್ಣ
ಬಾಳು
ಮೂರೇ ದಿನ ಬಾಳ ಜೋಪಾನ
ಬಾಳ
ಮೆರಿಬೇಡ ಬೀಳ್ತಿ ಕಣಣ್ಣ
ನಂಬ್ದೋರಿಗೆ
ಅನ್ನ ಹಾಕ್ದೋರಿಗೆ
ಎಂದು
ಬೆನ್ನಲ್ಲಿ ಚೂರಿ ಹಾಕಬೇಡಣ್ಣ
ಏರೋದಿಕ್ಕೆ
ಏಣಿ ಹಾಕ್ದೋರಿಗೆ
ಎಂದು
ನೀನು ಜಾಡ್ಸಿ ಒದೆಯಬೇಡಣ್ಣ
ಬಾಳು
ಮೂರೇ ದಿನ ಬಾಳ ಜೋಪಾನ
ಬಾಳ
ಮೆರಿಬೇಡ ಬೀಳ್ತಿ ಕಣಣ್ಣ
ಅಣ್ಣ
ಬಾರಣ್ಣ
ಗುಂಡಾಗಿದೆ
ಭೂಮಿ ಗುಂಡಾಗಿದೆ
ಮತ್ತೆ
ಮತ್ತೆ ನಾವು ಸಿಗ್ತೀವಣ್ಣ
ಗುಂಡಾಗಿದೆ
ಭೂಮಿ ಗುಂಡಾಗಿದೆ
ಮತ್ತೆ
ಮತ್ತೆ ನಾವು ಸಿಗ್ತೀವಣ್ಣ
ಹುಟ್ಟು
ಸಾವು ಹಳಿಯ ಮೇಲೆ
ಓಡ್ತಾಯಿದೆ
ನಮ್ಮ ಬಾಳ ಬಂಡಿ
ಹತ್ತಿದೋರೆಲ್ಲ
ಇಳಿಯಲೇಬೇಕು
ನಿನ್ನೂರು
ಬಂದಾಗ ಇಳ್ಕೊಳೋ ಅಣ್ಣ
ಬಾಳು
ಮೂರೇ ದಿನ ಬಾಳ ಜೋಪಾನ
ಬಾಳ
ಮೆರಿಬೇಡ ಬೀಳ್ತಿ ಕಣಣ್ಣ
ಮೋಸ
ಮಾಡಿ ಪ್ರೀತಿ ಮಾಡಬಹುದಣ್ಣ
ಪ್ರೀತಿ
ಮಾಡಿ ಮೋಸ ಮಾಡ್ಬಾರದಣ್ಣ
ಗಂಡಾಗಲಿ
ಹೆಣ್ಣಾಗಲಿ
ಪ್ರೀತೀಲಿ
ನಂಬಿಕೆನೆ ದೈವ ಅಣ್ಣ
ಕೊಟ್ಟ
ಮಾತು ಕಟ್ಟಿ ಕೊಟ್ಟ ಬುತ್ತಿ
ಬಾಳಿಕೆ
ಬರೋದಿಲ್ಲ ತಿಳ್ಕೊಳೊ ಅಣ್ಣ
ಬಾಳು
ಮೂರೇ ದಿನ ಬಾಳ ಜೋಪಾನ
ಬಾಳ
ಮೆರಿಬೇಡ ಬೀಳ್ತಿ ಕಣಣ್ಣ