ಬಾಳುವಂತ ಹೂವೆ -Baaluvantha hoove Song Lyrics in kannada – Akasmika movie song Lyrics

Movie: Aakasmika
Song: Baaluvantha hoove
Music: Hamsalekha
Singer: Dr. Rajkumar

ಬಾಳುವಂತ
ಹೂವೆ ಬಾಡುವ ಆಸೆ ಏಕೆ
ಬಾಳುವಂತ
ಹೂವೆ ಬಾಡುವಾಸೆ ಏಕೆ
ಹಾಡುವಂತ
ಕೋಗಿಲೆ ಅಳುವ ಆಸೆ ಏಕೆ
ಕವಲುದಾರಿಯಲ್ಲಿ
ಬಾಳು ಸಾಧ್ಯವೆ
ಅವಳಿ
ದೋಣಿ ಮೇಲೆ ಯಾನ ಯೋಗ್ಯವೇ


ಬಾಳುವಂತ
ಹೂವೆ ಬಾಡುವ ಆಸೆ ಏಕೆ
ಹಾಡುವಂತ
ಕೋಗಿಲೆ ಅಳುವ ಆಸೆ ಏಕೆ
ಯಾರಿಗಿಲ್ಲ
ನೋವು, ಯಾರಿಗಿಲ್ಲ ಸಾವು
ವ್ಯರ್ಥ
ವ್ಯಸನದಿಂದ ಸಿಹಿಯೂ ಕೂಡ ಬೇವು
ಬಾಳು
ಒಂದು ಸಂತೆ, ಸಂತೆ ತುಂಬಾ ಚಿಂತೆ
ಮದ್ಯ
ಮನಗಳಿಂದ ಚಿಂತೆ ಬೆಳೆವುದಂತೆ
ಅಂಕೆ
ಇರದ ಮನಸನು ಡಂಡಿಸುವುದು ನ್ಯಾಯ
ಮೂಖ ಮುಗ್ಧ
ದೇಹವ ಹಿಂಸಿಸುವುದು ಹೇಯ
ಸಣ್ಣ
ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ
ಅಳುಕು ಸಾಲದೆ ತುಂಬು ಬದುಕು ಬರಡಾಗಲು
ಬಾಳುವಂತ
ಹೂವೆ ಬಾಡುವ ಆಸೆ ಏಕೆ
ಹಾಡುವಂತ
ಕೋಗಿಲೆ ಅಳುವ ಆಸೆ ಏಕೆ
ಬಾಳ ಕದನದಲ್ಲಿ
ಭರವಸೆಗಳು ಬೇಕು
ನಾಳೆ
ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ
ಮಾನವರಿಗೆ ಆದ್ಯತೆ
ನಾವೆ
ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ
ಈಸಬೇಕು, ಇದ್ದು ಜಯಿಸಬೇಕು
ನಾಗರಿಕರಾದಮೇಲೆ
ಸುಗುಣರಾಗಬೇಕು
ನಿನ್ನ
ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು
ಕಾಣದೆ ಜಗವನೇಕೆ ನೀ ದೂರುವೆ
ಬಾಳುವಂತ
ಹೂವೆ ಬಾಡುವ ಆಸೆ ಏಕೆ
ಹಾಡುವಂತ
ಕೋಗಿಲೆ ಅಳುವ ಆಸೆ ಏಕೆ
ಕವಲು
ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ
ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ
ಹೂವೆ ಬಾಡುವ ಆಸೆ ಏಕೆ
ಹಾಡುವಂತ
ಕೋಗಿಲೆ ಅಳುವ ಆಸೆ ಏಕೆ

Leave a Reply

Your email address will not be published. Required fields are marked *