ಬಾಳಲಿ ಜ್ಯೋತಿಯು – Baalali Jyothiyu Song Lyrics in Kannada – Sowbhagya lakshmi Kannada Movie Songs Lyrics

ಚಿತ್ರ: ಸೌಭಾಗ್ಯಲಕ್ಷ್ಮಿ


ಗಾಯನ: ವಾಣಿ ಜಯರಾಮ್ & SP ಶೈಲಜಾ
ಸಂಗೀತ : ಎಸ್.ಪಿ. ಬಾಲಸುಬ್ರಹ್ಮಣ್ಯಂ
ಸಾಹಿತ್ಯ: ಚಿ. ಉದಯಶಂಕರ್

 


ಬಾಳಲಿ ಜ್ಯೋತಿಯು

ಎಂದು ಆರದಿರಲೀ

ಇರುಳನ್ನು ನುಂಗಿ

ಶಾಂತಿ ತುಂಬಿ ಸಹನೇ ತುಂಬಿ

ಆನಂದವಾ ನೀಡಲೀ

ಆಆಆ  ಬಾಳಲಿ ಜ್ಯೋತಿಯು

ಎಂದು ಆರದಿರಲೀ

ಇರುಳನ್ನು ನುಂಗಿ

ಶಾಂತೀ ತುಂಬಿ ಸಹನೇ ತುಂಬಿ

ಆನಂದವಾ ನೀಡಲೀ

ಆಆಆ ಬಾಳಲಿ ಜ್ಯೋತಿಯು

ಎಂದು ಆರದಿರಲೀ

♫♫♫♫♫♫♫♫♫♫♫♫


ಸೌಭಾಗ್ಯ ಲಕ್ಷ್ಮಿ ಬಂದೂ

ಮನೆಯಲ್ಲಿ ನಿಲ್ಲಲೀ

ಬಂಗಾರ ಗೆಜ್ಜೆ ನಾದಾ

ಮನೆಯಲ್ಲಿ ತುಂಬಲೀ

ಆನಂದ ಲಕ್ಷ್ಮಿ ಬಂದೂ

ಮನದಲ್ಲಿ ನಿಲ್ಲಲೀ

ಆನಂದಗೀತೆ ನಮ್ಮಾ

ಬದುಕಲ್ಲಿ ತುಂಬಲೀ

ಒಲವನ್ನು ತಂದಾ ಸ್ವಾಮೀ

ಸುಖವಾಗಿ ಬಾಳಲೀ

ಒಲವನ್ನು ತಂದಾ ಸ್ವಾಮೀ

ಸುಖವಾಗಿ ಬಾಳಲೀ

ವೇದನೆ ಶೋಧನೆ ಇನ್ನು ಏತಕೆ

ಕಾಪಾಡು ನಮ್ಮನ್ನು ತಾ…ಯೀ

ಬಾಳಲಿ ಜ್ಯೋತಿಯು

ಎಂದು ಆರದಿರಲೀ

ಇರುಳನ್ನು ನುಂಗಿ

ಶಾಂತೀ ತುಂಬಿ ಸಹನೇ ತುಂಬಿ

ಆನಂದವಾ ನೀಡಲೀ

ಆಆಆ ಬಾಳಲಿ ಜ್ಯೋತಿಯು

ಎಂದು ಆರದಿರಲೀ..

♫♫♫♫♫♫♫♫♫♫♫♫


ಬದುಕಲ್ಲಿ ಎಂದೂ ನಾನೂ

ನೋವನ್ನೇ ನೋಡಿದೇ

ಮುಳ್ಳಲ್ಲೆ ಓಡಿ ಬಂದೆ

ಬೆಳಕನ್ನೇ ಕಾಣದೇ

ಮುಳ್ಳೆಲ್ಲ ಹೂವಿನಂತೇ

ಮೃದುವಾಗಿ ಹೋಗಲೀ

ಕಣ್ಣೀರು ಇನ್ನು ಮುಂದೇ

ಪನ್ನೀರೆ ಆಗಲೀ

ಈ ನಿನ್ನ ಸ್ನೇಹಾ ಹೀಗೇ

ಹೊಸದಾರಿ ತೋರಲಿ

ಈ ನಿನ್ನ ಸ್ನೇಹಾ ಹೀಗೇ

ಹೊಸದಾರಿ ತೊರಲೀ

ಕಾಣದ ಭೀತಿಯ ದೂರ ಮಾಡುತಾ

ಕಾಪಾಡು ನಮ್ಮನ್ನು ದೇವೀ

ಬಾಳಲಿ ಜ್ಯೋತಿಯು

ಎಂದು ಆರದಿರಲೀ

ಇರುಳನ್ನು ನುಂಗಿ

ಶಾಂತೀ ತುಂಬಿ ಸಹನೇ ತುಂಬಿ

ಆನಂದವಾ ನೀಡಲೀ

ಆಆಆ ಬಾಳಲಿ ಜ್ಯೋತಿಯು

ಎಂದು ಆರದಿರಲೀ…



Leave a Reply

Your email address will not be published. Required fields are marked *