ಬನ್ನಿ ಭಾವಗಳೆ – Banni Bhavagale Lyrics – C Ashwath – Shivamogga Subbanna – N S Lakshmi Narayana Bhatta – Bhavageethe

ಸಾಹಿತ್ಯ
: N. S. ಲಕ್ಷ್ಮೀನಾರಾಯಣ ಭಟ್ಟ

ಸಂಗೀತ
: C. ಅಶ್ವಥ್

ಗಾಯನ
: ಶಿವಮೊಗ್ಗ ಸುಬ್ಬಣ್ಣ

 

ಬನ್ನಿ
ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ

ಬನ್ನಿ
ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ

ಬತ್ತಿದೆದೆಯಲ್ಲಿ
ಬೆಳೆಯಿರಿ ಹಸಿರನು

ಬತ್ತಿದೆದೆಯಲ್ಲಿ
ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ

ಪ್ರೀತಿಯ
ಮಳೆ ಸುರಿಸಿ

 

ಬನ್ನಿ
ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ

ಬನ್ನಿ
ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ

ತವರಿನೆದೆಗೆ
ತಂಪೆರೆಯುವ ಮೇಘದ

ತವರಿನೆದೆಗೆ
ತಂಪೆರೆಯುವ ಮೇಘದ ಪ್ರೀತಿಯ ಧಾರೆಯಲಿ

ಪ್ರೀತಿಯ
ಧಾರೆಯಲಿ

 

ಬನ್ನಿ
ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ

ಬತ್ತಿದೆದೆಯಲ್ಲಿ
ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ

ಪ್ರೀತಿಯ
ಮಳೆ ಸುರಿಸಿ

 

ಲೋಕಕೆ
ಹೊದಿಸಿದ ಕರಿತೆರೆ ಸರಿಸುವ ಅರುಣೋದಯದಲ್ಲಿ

ಲೋಕಕೆ
ಹೊದಿಸಿದ ಕರಿತೆರೆ ಸರಿಸುವ ಅರುಣೋದಯದಲ್ಲಿ

ಪಕ್ಷಕ್ಕೊಮ್ಮೆ
ಬಿಳಿ ಪತ್ತಲ ನೇಯುವ

ಪಕ್ಷಕ್ಕೊಮ್ಮೆ
ಬಿಳಿ ಪತ್ತಲ ನೇಯುವ ಹುಣ್ಣಿಮೆ ಹಸ್ತದಲಿ

ಹುಣ್ಣಿಮೆ
ಹಸ್ತದಲಿ

 

ಬನ್ನಿ
ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ

ಬತ್ತಿದೆದೆಯಲ್ಲಿ
ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ

ಪ್ರೀತಿಯ
ಮಳೆ ಸುರಿಸಿ

 

ಬನ್ನಿ
ಬನ್ನಿ ನನ್ನೆದೆಯ ಬಯಲಿದು ಬಿತ್ತದ ಕನ್ನೆನೆಲ

ಬನ್ನಿ
ಬನ್ನಿ ನನ್ನೆದೆಯ ಬಯಲಿದು ಬಿತ್ತದ ಕನ್ನೆನೆಲ

ಬೆಳೆಯಿರಿ
ಇಲ್ಲಿ ಬಗೆ ಬಗೆ ತೆನೆಯ ನಮಿಸುವೆ ನೂರು ಸಲ

ನಿಮ್ಮನೆ
ಕನವರಿಸಿ ನಿಮಗೇ ಮನವರಿಸಿ

ಕಾಯುತ್ತಿರುವೆನು
ಕ್ಷಣಕ್ಷಣವೂ ಎದೆಯನು ಹದಗೊಳಿಸಿ

 

ಬನ್ನಿ
ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ

ಬತ್ತಿದೆದೆಯಲ್ಲಿ
ಬೆಳೆಯಿರಿ ಹಸಿರನು

ಬತ್ತಿದೆದೆಯಲ್ಲಿ
ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ

ಪ್ರೀತಿಯ
ಮಳೆ ಸುರಿಸಿ

 

 

Leave a Reply

Your email address will not be published. Required fields are marked *