ಬಂಗಾರದಿಂದ ಬಣ್ಣಾನ ತಂದ – Bangaaradinda Lyrics – Preethsod thappa Kannada Movie Songs Lyrics – Ravichandran


ಚಿತ್ರ: ಪ್ರೀತ್ಸೋದ್ ತಪ್ಪಾ

ಗಾಯಕರು: ಕೆ.ಜೆ.ಏಸುದಾಸ್

ಹಾಹ ಹಾ

ಹೇ ಹೇ ಏಏಏ

ನಾ ನನ ನನನಾ

ತಂದಾನಾ ತಂದಾನಾ

ಬಂಗಾರದಿಂದ ಬಣ್ಣಾನ ತಂದ

ಸಾರಂಗದಿಂದ ನಯನಾನ ತಂದ

ಮಂದಾರವನ್ನು ಹೆಣ್ಣಾಗು ಎಂದ

ದಾಳಿಂಬೆಯಿಂದ ದಂತಾನ ತಂದ

ಮಕರಂದ ತುಂಬಿ ಅಧರಾನ ತಂದ

ನನ್ನನ್ನು ತಂದಾ

ರುಚಿ ನೋಡು ಎಂದ

ತಂದಾನ ತಂದ ತಂದಾನ ತಂದ

ಅಪರೂಪದಂದ ನನಗಾಗಿ ತಂದ


ಚಂದಮಾಮನಿಂದ ಹೊಳಪನು ತಂದ

ಬಾಳೆದಿಂಡಿನಿಂದ ನುಣುಪನು ತಂದ

ಅಂದ

ಅಂದ

ಅಂದ ಚಂದ ಹೊರುವ ಕಂಬದ

ಜೋಡಿಗೇ ಮಿಂಚಿರೀ ಎಂದ

ಹಂಸದಿಂದ ಕೊಂಚ ನಡಿಗೆಯ ತಂದ

ನವಿಲಿನಿಂದ ಕೊಂಚ ನಾಟ್ಯವ ತಂದ

ನಯವೊ

ಲಯವೊ

ನಯವೊ ಲಯವೊ ರೂಪಾಲಯವೊ

ರಸಿಕನೇಹೇಳು ನೀ ಎಂದ

ತಂಗಾಳಿಯಿಂದ ಸ್ನೇಹಾನ ತಂದ

ಲತೆ ಬಳ್ಳಿಇಂದ ಸಿಗ್ಗನ್ನು ತಂದ

ಸಿಗ್ಗನ್ನು ಇವಳ ನಡುವಾಗು ಎಂದ

ನಡುವನ್ನು ಅಳಿಸಿ ಎದೆ ಭಾರ ತಂದ

ನನ್ನನ್ನು ಲತೆಗೆ ಮರವಾಗು ಎಂದ

ತಂದಾನ ತಂದ ತಂದಾನ ತಂದ

ಅಪರೂಪದಂದ ನನಗಾಗಿ ತಂದ

ನನನನನಾನ

ನನನಾನಾ

ನನನಾ ನಾ ನನನಾ ನಾ

ಹೇಹೇಹೇಹೇಹೇಹೇ

ಗಂಧ ತಂದನೊ ಘಮಲುಗಳಿಂದ

ರತಿಯ ತಂದನೊ ಅಮಲುಗಳಿಂದ

ಘಮಲಾ

ಅಮಲಾ

ಘಮಲಾ ಅಮಲಾ

ಕಂಪನ ಕಡಲ ದೋಣಿಗೇ

ಕಾಮನಾ ತಂದಾ

ಭೂಮಿ ಸುತ್ತ ಇರೊ ಕಾಂತವ ತಂದ

ಬಾನಿನಿಂದ ಏಕಾಂತವ ತಂದ

ಒಲವು

ಚೆಲುವು

ಒಲವು ಚೆಲುವು ಕೂಡೊ ಕಲೆಗೆ

ಘರ್ಷಣೇ ಆಕರ್ಷಣೇ ತಂದಾ

ಕರಿ ಮೋಡದಿಂದ ಮುಂಗುರುಳ ತಂದ

ಕೋಲ್ಮಿಂಚಿನಿಂದ ರತಿ ನೋಟ ತಂದ

ಜಲಧಾರೆಯಿಂದ ಒಲವನ್ನು ತಂದ

ಒಲವನ್ನು ಓಡೊ ನದಿಯಾಗು ಎಂದ

ನನ್ನನ್ನು ನದಿಗೆ ಕಡಲಾಗು ಎಂದ

ಬಂಗಾರದಿಂದ ಬಣ್ಣಾನ ತಂದ

ಸಾರಂಗದಿಂದ ನಯನಾನ ತಂದ

ಮಂದಾರವನ್ನು ಹೆಣ್ಣಾಗು ಎಂದ

ತಂದಾನ ತಂದ

ತಂದಾನ ತಂದ

ಅಪರೂಪದಂದ ನನಗಾಗಿ ತಂದ



Bangaradinda Lyrics 

Leave a Reply

Your email address will not be published. Required fields are marked *