ಚಿತ್ರ: ಪರಸಂಗದ ಗೆಂಡೆತಿಮ್ಮ
ಡಾ|| ದೊಡ್ಡರಂಗೇಗೌಡ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ: ರಾಜನ್–ನಾಗೇಂದ್ರ
ನೋಟದಾಗೆ ನಗೆಯಾ ಮೀಟೀ…..
ಮೋಜಿನಾಗೆ ಎಲ್ಲೆಯ ದಾಟೀ..ಹ್ಮಾ….
ನೋಟದಾಗೆ ನಗೆಯಾ ಮೀಟಿ
ಮೋಜಿನಾಗೆ ಎಲ್ಲೆಯ ದಾಟೀ
ಮೋಡಿಯ ಮಾಡಿದೋಳ ಪರಸಂಗ ಐತೇ
ಪರಸಂಗ ಐತೇ
ಆ..ಹಾ ಮೋಹಾವ ತೋರಿದೋಳ
ಪರಸಂಗ ಐತೇ..
ಪರಸಂಗ ಐತೇ..
♫♫♫♫♫♫♫♫♫♫♫♫
321
ಬರಡಾದ ಬದ್ಕೀಗೆ ಹೊಸಾ ನೇಸ್ರು ಅರಳೈತೇ
ಮನಸ್ನಾಗೆ ಹೊಸ ಆಸೆ ಹೊಸ ಬಾಸೆ ಬೆಳೆದೈತೇ
ಕುಂತ್ರೂ ನಿಂತ್ರೂ ನನ್ನ ಚೆಲುವಿ ಚೆಲುವೇ ಕಾಡೈತೆ
ಮೈಯಾಗೆ ಸಂತೋಸದ ಮಲ್ಲೀಗೆ ಬೀರೈತೆ
ಮೈಯಾಗೆ ಸಂತೋಸದ ಮಲ್ಲಿಗೇ ಬೀರೈತೆ
ನೋಟದಾಗೆ ನಗೆಯಾ ಮೀಟಿ
ಮೋಜಿನಾಗೆ ಎಲ್ಲೆಯ ದಾಟೀ ಹ್ಮಾ..
ಮೋಡಿಯ ಮಾಡಿದೋಳ ಪರಸಂಗ ಐತೇ..
ಪರಸಂಗ ಐತೇ..
ಹೇಹೇ ಹೆಹೆಹೆ
ಮೋಹಾವ ತೋರಿದೋಳ
ಪರಸಂಗ ಐತೇ..
ಪರಸಂಗ ಐತೇ..
♫♫♫♫♫♫♫♫♫♫♫♫
321
ಕಡು ಬಾಳ ಹಾದ್ಯಾಗೆ ನನ್ನಪರಂಜಿ ಒಳೆದೈತೇ
ಹಗಲಾಗೆ ಇರುಳಾಗೆ ಆ ನಿಲುವೇ ಸೆಳೆದೈತೇ..
ಬಲವಾದ ಹಂಬಲಕೆ ನಗೆಬಿಲ್ಲೆ ಮಿನಗೈತೆ
ನನ್ನಾ ಹುಡುಗಿ ತನಿ ಬೆಡಗು ಮಿಂಚೂತ ಮೆರೆದೈತೇ
ನನ್ನಾ ಹುಡುಗಿ ತನಿ ಬೆಡಗು ಮಿಂಚೂತ ಮೆರೆದೈತೆ
ಹೈಯ್ ನೋಟದಾಗೆ ನಗೆಯಾ ಮೀಟಿ
ಮೋಜಿನಾಗೆ ಎಲ್ಲೆಯ ದಾಟೀ.. ಹ್ಮಾಹ್ಮಾ
ಮೋಡಿಯ ಮಾಡಿದೋಳ ಪರಸಂಗ ಐತೇ..
ಪರಸಂಗ ಐತೇ
ಆಹಾ ಮೋಹಾವ ತೋರಿದೋಳ
ಪರಸಂಗ ಐತೇ..
ಪರಸಂಗ ಐತೇ..
ಕೊರಳಾಗೆ ಇನಿದನಿ ಕೋಗಿಲೆ
ಸರವೈತೇ…ಹ್ಮಾ…
ನಡೆಯಾಗೆ ತುಳುಕುವಾ
ಹಂಸದಾ ಬಳುಕೈತೇ..
ಮುಕದಾಗೆ ತಾವರೆಯ ಒಳಪೇ ಚೆಲ್ಲೈತೆ
ನನ್ ರಾಣಿ ನಿಜ ರೂಪು
ರಂಗನ್ನೇ ಹಣಿಸೈತೆ
ನನ್–ರಾಣಿ ನಿಜ ರೂಪು
ರಂಗನ್ನೇ ಹಣಿಸೈತೆ
ಹ್ಹಹ್ಹ ಹ್ಹಹ್ಹಹ್ಹ ಹ್ಮುಹ್ಮು ಹ್ಮುಹ್ಮುಹ್ಮು
ಹ್ಹಹ್ಹ ಹ್ಹಹ್ಹಹ್ಹ ಹ್ಮುಹ್ಮು ಹ್ಮುಹ್ಮುಹ್ಮು
ಹ್ಹಹ್ಹ ಹ್ಹಹ್ಹಹ್ಹ ಹ್ಮುಹ್ಮು ಹ್ಮುಹ್ಮುಹ್ಮು
ಹ್ಹಹ್ಹ ಹ್ಹಹ್ಹಹ್ಹ ಹ್ಮುಹ್ಮು ಹ್ಮುಹ್ಮುಹ್ಮು