ನೆರಳನು ಕಾಣದ – Neralanu Kaanada Latheyante Song Lyrics in Kannada – Avala Hejje Kannada Movie Songs Lyrics

ಚಿತ್ರ : ಅವಳ ಹೆಜ್ಜೆ
ಗಾಯಕರು: ಎಸ್.ಪಿ.ಬಿ




ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಸೋತಿದೆ ಮೊಗವೇಕೆ
ಏನು ನಿನ್ನ ಚಿಂತೆ ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆಹೇಳೇ ನನ್ನ ಕಾಂತೆ
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಏನು ನಿನ್ನ ಚಿಂತೆ ಹೇಳೇ ನನ್ನ ಕಾಂತೆ
♫♫♫♫♫♫♫♫♫♫♫♫

ನಯನದಲಿ ಕಾಂತಿ ಇಲ್ಲ
ತುಟಿಗಳಲಿ ನಗುವೇ ಇಲ್ಲ
ಸವಿಯಾದ ಮಾತನು ಇಂದೇಕೋ ಕಾಣೆನು
ನಿನ್ನ ಮನಸು ನಾನು ಬಲ್ಲೆ
ನಿನ್ನ ವಿಷಯವೆಲ್ಲ ಬಲ್ಲೆ
ನೀನೇನು ಹೇಳದೆ ನಾನೆಲ್ಲ ಹೇಳಲೇ
ಏನಿಂತ ನಾಚಿಕೆ ಕಣ್ಣೀರು ಏತಕೆ
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಏನು ನಿನ್ನ ಚಿಂತೆ ಹೇಳೇ ನನ್ನ ಕಾಂತೆ
♫♫♫♫♫♫♫♫♫♫♫♫

ಗುಡಿಯ ದೇವಿ ನೀನು
ತನುವ ಪ್ರಾಣ ನೀನು
ಬಾಳಲ್ಲಿ ನೆಮ್ಮದಿ ನಿನ್ನಿಂದ ಕಂಡೆನು
ನೀ ಅಳಲು ನೋಡಲಾರೆ
ನೀ ಇರದೇ ಬಾಳಲಾರೆ
ನನ್ನಲ್ಲಿ ಕೋಪವೇ ನಾ ನಿನಗೆ ಬೇಡವೇ
ನೀ ದೂರವಾದರೆ ನನಗಾರು ಆಸರೆ
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ
ಸೋತಿದೆ ಮೊಗವೇಕೆ
ಏನು ನಿನ್ನ ಚಿಂತೆ ಹೇಳೇ ನನ್ನ ಕಾಂತೆ
ಏನು ನಿನ್ನ ಚಿಂತೆಹೇಳೇ ನನ್ನ ಕಾಂತೆ
ಲಲ ಲ್ಲಲ್ಲ ಲಾ ಲ್ಲಲ್ಲ ಲಾಲ ಲ್ಲಲ್ಲ ಲಾ
ಲಲ ಲ್ಲಲ್ಲ ಲಾ ಲ್ಲಲ್ಲ ಲಾಲ ಲ್ಲಲ್ಲ ಲಾ
ಲಾ ಲಾ ಲಾ ಲಾ
ಲಾ ಲಾ ಲಾ …..ಲಾ ಲಾ

Leave a Reply

Your email address will not be published. Required fields are marked *