ನೀ ಪರಿಚಯ ಹೇಳದೆ – Ninna Sanihake – Nee Parichaya Song Lyrics in Kannada – Ninna Sanihake Kannada Movie – Raghu Dixit

Song
Title: Nee Parichaya

Movie: Ninna Sanihake

Music: Raghu Dixit

Lyrics: Vasuki Vaibhav

Singers: Siddhartha Belmannu, Rakshita Suresh


ನೀ… ಪರಿಚಯ ಹೇಳದೆ
ಸೆಳೆದೇ… ಉಸಿರನು ಮೆಲ್ಲಗೆ
ನಾ… ಹೊರಟರೂ ಎಲ್ಲಿಗೆ
ತಲುಪೋ… ತಾಣ ನಿನ್ನಲ್ಲಿದೆ
ಬಿಸಿಲಾ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ
ಈ… ಬದುಕಿನ ಸೌಖ್ಯವು
ಅಡಗಿ ನಿನ್ನ ಕಣ್ಣಲ್ಲಿದೆ
ಈ… ಮಧುರ ಸಾಂಗತ್ಯವು
ಮನದ ಹೆಜ್ಜೆ ಗುರುತಾಗಿದೆ
ಅರಳೋ ಪ್ರತಿ ಆರಂಭಕೂ
ಹೊಸೆವ ಕಥೆ ನೂರಾಗಿದೆ


ನೀನಿಲ್ಲದೆ ಬೇರೆ ಗಮನಾನೆ ಇಲ್ಲ
ಒಲವಾಗಿದೆ ಬೇರೆ ಸಂದೇಹವಿಲ್ಲ…

ಆಆಆಆಆಆಆಆ
ಈ ಭಾವಲೋಕದ ಒಪ್ಪಂದವೆಲ್ಲ
ನಿಯಮಾನುಸಾರಕೆ ಸಂಬಂಧಿಸಿಲ್ಲ
ನಾ ಬದುಕುವ ಆಸೆಗೆ
ಹುರುಪು ಈಗ ಬಂದಂತಿದೆ
ಈ ಕನಸಿನಾಕಾಶಕ್ಕೆ
ಹೊಳಪು ನೀನೆ ತಂದಂತಿದೆ

ಇಷ್ಟೊಂದು ಮೌನ
ಒಬ್ಬಂಟಿಯಾಗಿ ಬೇಕಿಲ್ಲ ನೀನಿಲ್ಲದೆ
ಅತ್ಯಂತವಾಗಿ ಅಭ್ಯಾಸವಾದೆ
ಬೇಕೆಂದೇ ಈ ಜೀವಕೆ
ಕಾರ್ಮೋಡ ಸರಿದು ಬಾಳಲ್ಲಿ
ಹೊಸದಾಗಿ ಸುಳಿದು ತಂಗಾಳಿ

ಬದಲಾಗಿದೆ ಲೋಕವೇ

ಒಂದಾಗಲು ಸಾಲದೇ




ನೀ… ಪರಿಚಯ ಹೇಳದೆ
ಸೆಳೆದೇ… ಉಸಿರನು ಮೆಲ್ಲಗೆ
ನಾ… ಹೊರಟರೂ ಎಲ್ಲಿಗೆ
ತಲುಪೋ… ತಾಣ ನಿನ್ನಲ್ಲಿದೆ
ಬಿಸಿಲಾ ಸುಡೋ ರಂಗೋಲಿಗೆ
ಭುವಿಯ ನೆಲ ಕಾದಂತಿದೆ






ಇದನ್ನೂ ಓದಿ



Leave a Reply

Your email address will not be published. Required fields are marked *