ನೀ ನನಗೆ ಸಿಗಬಾರ್ದ – Kannada Kavanagalu – ಕನ್ನಡ ಕವನಗಳು – Kavana #2 – Nee nanage sigabaarda


ನೀ ನನಗೆ ಸಿಗಬಾರ್ದ – Nee nanage sigabaarda

-ಪ್ರಸನ್ನ ಕುಮಾರ್

ಕನಸಲ್ಲಿ ಕಣ್ಣೆರಡು ನನ್ನನ್ನೇ ನೋಡುತ್ತಾ
ಬಾ ಅಂತ ಸನ್ನೆಯಲಿ ಕರಿಬಾರ್ದ
ನನ್ನೆದೆಯ ಗೂಡಲ್ಲಿ ನೀ ಸುಮ್ನೆ ನಿಂತ್ಕೊಂಡು
ಹೃದಯಾನ ಕೊಡು ಅಂತ ಕೇಳ್ಬಾರ್ದ
ರಾತ್ರಿಯಲಿ ನಿನ್ನ ಹೆಸರ ನಾನೊಮ್ಮೆ ಕೂಗ್ದಾಗ
ಹುಣ್ಣಿಮೆಯ ಚಂದ್ರ ಬರ್ಬಾರ್ದ
ಚಂದ್ರ ಬಂದಾಗ ನಾ ಕೊಟ್ಟ ಸಂದೇಶ
ನಿನ್ನ ಕನಸಲ್ಲಾದ್ರೂ ಹೇಳ್ಬಾರ್ದ
ನೀ ಬಿಡುವ ಏದುಸಿರು ನನ್ನೊಳಗೆ ಸಂಚರಿಸಿ
ಹೃದಯಕ್ಕೆ ಕಂಪನವ ಕೊಡಬಾರ್ದ
ನಿನ್ನೆದೆಯ ಗೂಡಿನ ಯಾವ್ದಾದ್ರೂ ಮೂಲೆಯಲಿ
ಬಾಡಿಗೆಗೆ ಮನೆಯೊಂದ ಕೊಡಬಾರ್ದ
ನನ್ನೆದೆಯ ಗೂಡಲ್ಲಿ ಗೂಡೊಂದ ಕಟ್ಟಿರುವೆ
ಗುಬ್ಬಚ್ಚಿ ನೀನಾಗಿ ಬರ್ಬಾರ್ದ
ನೀ ಹಾರಿ ಹೋದಾಗ ನಾ ಚೀರಿಕೊಂಡಾಗ
ನೀ ತಿರುಗಿ ಸ್ಮೈಲೊಂದ ಕೊಡಬಾರ್ದ
ನಿನ್ನ ಮುಖದಲ್ಲಿ ಯಾವ್ದಾದ್ರೂ ಕೆನ್ನೆಯಲಿ
ನಾನೊಂದು ಗುಳಿಯಾದ್ರೂ ಆಗ್ಬಾರ್ದ
ನನ್ ಹತ್ರ ನೀ ಬಂದು ಏನಾದ್ರೂ ಆಗೋಗ್ಲಿ
ಹೃದಯ ನಿಂದೇನೆ ಅನ್ಬಾರ್ದ
ಕಾವೇರಿ ತೀರದಲಿ ನೀ ಸುಮ್ನೆ ಬಂದಾಗ
ನೀರಿನಲಿ ಆಟಾನ ಆಡ್ಬಾರ್ದ
ನದಿಯಲ್ಲಿ ನಿನ್ನ ತಾಕಿ ಬಂದಂತ
 ಒಂದೆರಡು ಹನಿ ನೀರು ನಾನೇನೆ ಕುಡಿಬಾರ್ದ
ಬಿಸಿಲಲ್ಲಿ ನೀ ಬರಲು ನಾ ಕರಗಿ ನೀರಾಗಿ
ಬಾನಲ್ಲಿ ಮೋಡ ಆಗ್ಬಾರ್ದ
ಚಳಿಯಲ್ಲಿ ನೀ ನಡುಗಿ ಆತಂಕ ಪಡುವಾಗ
ನಿನಗೊಂದು ನಾ ಕಂಬಳಿ ಆಗ್ಬಾರ್ದ
ನಿನಗೆಂದೇ ನಾನೊಂದು ಪತ್ರವನು ಬರೆದಾಗ
ಕಣ್ಣಲ್ಲಿ ಕಣ್ಣಿಟ್ಟು 
ಓದ್ಬಾರ್ದ
ಕಣ್ಣಲ್ಲಿ ಕಣ್ಣಿಟ್ಟು ನೀನದನು ಓದ್ವಾಗ
ಮನಸಲ್ಲಿ ಮನಸನ್ನು ಇಡಬಾರ್ದ


 -ಪ್ರಸನ್ನ ಕುಮಾರ್

Kannada Kavanagalu
ಕನ್ನಡ ಕವನಗಳು
Kannada Kavithegalu
Kavitegalu
Kannada Saahitya
Love Quotes
Dream Girl
Love Poems
Love Poetry
Shayari 

Leave a Reply

Your email address will not be published. Required fields are marked *