ಸಂಗೀತ: ಮನೋಮೂರ್ತಿ
ಹಾಡು: ನೀ ಅಮೃತಧಾರೆ
ಗಾಯಕರು: ಹರೀಶ್ ರಾಘವೇಂದ್ರ & ಸುಪ್ರಿಯಾ ಆಚಾರ್ಯ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
321
ನೀ ಅಮೃತಧಾರೆ
ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ
ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ
ಹೇಗೆ ಬಾಳಲೀ
ಹೇ ಪ್ರೀತಿ ಹುಡುಗ
ಕೋಟಿ ಜನುಮ ಜೊತೆಗಾರ
ಹೇ ಪ್ರೀತಿ ಹುಡುಗ
ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ
ಹೇಗೆ ಬಾಳಲೀ
ಹೇ ಪ್ರೀತಿ ಹುಡುಗಾ
♬♬♬♬♬♬♬♬♬♬♬♬
321
ನೆನಪಿದೆಯೆ ಮೊದಲ ನೋಟ
ನೆನಪಿದೆಯೆ ಮೊದಲ ಸ್ಪರ್ಶ
ನೆನಪಿದೆಯೆ ಮತ್ತನು ತಂದ
ಆ ಮೊದಲ ಚುಂಬನಾ
ನೆನಪಿದೆಯೆ ಮೊದಲ ಕನಸು
ನೆನಪಿದೆಯೆ ಮೊದಲ ಮುನಿಸೂ
ನೆನಪಿದೆಯೆ ಕಂಬನಿ ತುಂಬಿ
ನೀನಿಟ್ಟ ಸಾಂತ್ವನ
ನೀ ಇಲ್ಲವಾದರೆ ನಾ
ಹೇಗೆ ಬಾಳಲೀ
ನೀ ಅಮೃತಧಾರೆ
ಕೋಟಿ ಜನುಮ ಜೊತೆಗಾತೀ
ನೀ ಅಮೃತಧಾರೆ
ಇಹಕು ಪರಕು ಸಂಗಾತಿ
ನೀ ಅಮೃತಧಾರೆ
♬♬♬♬♬♬♬♬♬♬♬♬
321
ನೆನಪಿದೆಯೆ ಮೊದಲ ಸರಸ
ನೆನಪಿದೆಯೆ ಮೊದಲ ವಿರಸಾ
ನೆನಪಿದೆಯೆ ಮೊದಲು ತಂದ
ಸಂಭ್ರಮದ ಕಾಣಿಕೆ
ನೆನಪಿದೆಯೆ ಮೊದಲ ಕವನ
ನೆನಪಿದೆಯೆ ಮೊದಲ ಪಯಣಾ
ನೆನಪಿದೆಯೆ ಮೊದಲ ದಿನದ
ಭರವಸೆಯ ಆಸರೆ
ನೀ ಇಲ್ಲವಾದರೆ ನಾ
ಹೇಗೆ ಬಾಳಲೀ
ಹೇ ಪ್ರೀತಿ ಹುಡುಗ
ಕೋಟಿ ಜನುಮ ಜೊತೆಗಾರ
ನೀ ಅಮೃತಧಾರೆ
ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ
ಹೇಗೆ ಬಾಳಲೀ
ನೀ ಅಮೃತಧಾರೆ