ಚಿತ್ರ : ಹೊಸಬೆಳಕು
ಹಾಡಿದವರು : ಡಾ. ರಾಜ್, ಎಸ್ ಜಾನಕಿ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ: M. ರಂಗರಾವ್
ನೀನಾದೆ ಬಾಳಿಗೆ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ನೀ ನಾದೆ ಬಾಳಿಗೆ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಬಾ ಎನ್ನ ಬಾಳಿನ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ
ಬಾ ಎನ್ನ ಬಾಳಿನ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
♫♫♫♫♫♫♫♫♫♫♫♫
ರವಿ ಮೂಡಿ ಆಗಸದಲ್ಲಿ
ಬೆಳಕನ್ನು ಚೆಲ್ಲಿದ ಹಾಗೆ
ಇರುಳಾದ ಬಾಳಲಿ ಬಂದೆ
ಸಂತೋಷ ಸಂಭ್ರಮ ತಂದೆ
ಈ ಜೀವವು… ನಲಿದಾಡಿದೆ…
ಈ ಜೀವವು ನಲಿದಾಡಿದೆ
ಇನ್ನು ಎಂದೆಂದೂ
ನೋವು ನಿನಗಿಲ್ಲ
ಇನ್ನು ಎಂದೆಂದೂ
ನೋವು ನಿನಗಿಲ್ಲ
ಬಿಸಿಲಲ್ಲಿ ನೆರಳಾಗಿ ಹಿತ ನೀಡುವೆ
ನೀ ನಾದೆ ಬಾಳಿಗೆ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ
♫♫♫♫♫♫♫♫♫♫♫♫
ಹೊಸ ರಾಗ ಹಾಡಲು ನೀನು
ಹೊಸ ಲೋಕ ಕಂಡೆನು ನಾನು
ಹೊಸ ದಾರಿ ನೋಡಿದೆ ಏನು
ಜೊತೆಯಾಗಿ ಬರುವೆಯ ಇನ್ನು
ನನ್ನಾಸೆಯಾ ಪೂರೈಸೆಯ …
ನನ್ನಾಸೆಯ ಪೂರೈಸೆಯಾ
ನಿನ್ನ ಉಸಿರಾಗಿ ಬಾಳ ಹಸಿರಾಗಿ
ನಿನ್ನ ಉಸಿರಾಗಿ ಬಾಳ ಹಸಿರಾಗಿ
ಎಂದೆಂದೂ ಒಂದಾಗಿ ನಾ ಬಾಳುವೇ
ಬಾ ಎನ್ನ ಬಾಳಿನ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಆ.. ಆಆಆ.. ಆ
ಆ.. ಆಆಆ.. ಆ
ಆ.. ಆಆಆಆ.. ಆ
ಆ.. ಆಆಆ.. ಆ
Neenaade Baalige Jyothi Song Karaoke with Scrolling Lyrics by PK Music