Singer: Adhvik
Lyrics : Adhvik, Arjun Kishor Chandra, Naveen D.E
Music Composition & Programming : Adhvik
Lyrics : Adhvik, Arjun Kishor Chandra, Naveen D.E
Music Composition & Programming : Adhvik
ಕೇಳದೆ ಬಂದೆ ನೀನು
ಹೇಳದೆ ನನ್ನ ಮನಸಲ್ಲಿ
ಕಣ್ಣಿಗೆ ಕಾಣದ ಈ ಪ್ರೀತಿಯೆಂಬ ರಂಗು ಚೆಲ್ಲಿ
ಕಾಣದೆ ಹೋದೆ ಎಲ್ಲಿ ಕಾದಿದೆ ನಿನ್ನ ನೆನಪಿಲ್ಲಿ
ಯಾರನ್ನ ಕಂಡರೂ ನಿನ್ನೆ ಕಾಣುವೆ ಅಲ್ಲಿ
ಹುಡುಕೋ ದಾರಿ ನಿನ್ನಲಿ ಸೇರಿ
ನೀ ಸಿಕ್ಕರೆ ಸಾಕು
ಬೇಡುವೆ ಸಾರಿ ಭಯವ ಮೀರಿ
ನಿನ್ನ ಒಲವೆ ಬೇಕು
ಪ್ರೀತಿಯ ತೋರಿ ಒಮ್ಮೆಲೆ ಜಾರಿ
ಎಲ್ಲಿಗೆ ಹೋದೆ ನೀನು ಪ್ರತಿಕ್ಷಣವೂ ನಾ
ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೆ ನಾ ಕಾದು ಕುಂತೆ ನಾ
ಕಾದು ಕುಂತೆ ನಾ ಕೊರಗಿ ಸೋತೆ ನಾ
ನಿನ್ನ ನೆನಪಲ್ಲೇ
ನಿನ್ನ ಗುಂಗಲ್ಲೇ
ಇರಲಾರೆನು ನಾ ಇನ್ನೆಂದೂ ನಿನ್ನ ಮರೆತು
ನಡೆದ ದಾರಿಯ ತುಂಬಾ
ನಿನ್ನದೇ ಹೆಜ್ಜೆಯ ಗುರುತು
ಕುಂತ ಜಾಗವೆಲ್ಲಾ ಕೇಳಿವೆ ನಿನ್ನನೇ ಕುರಿತು
ನಿನ್ನ ಹುಡುಕಲು ಕೈಯ್ಯ ಚಾಚಿ
ಹೆಸರ ಎಲ್ಲೆಡೆ ಗೀಚಿ
ಮಾಯವಾದೆ ನೀನು ಈಗ ನನ್ನ ಪ್ರೀತಿಯ ದೋಚಿ
ಇಬ್ಬನಿಯಂತೆ ಕಂಬನಿ ಸುರಿಸಿ
ಕಾಯುವೆ ನಾ ನಿನ್ನರಿಸಿ
ಪ್ರತಿಯುಸಿರಲ್ಲೂ ನಾ
ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೆ ನಾ ಕಾದು ಕುಂತೆ ನಾ
ಕಾದು ಕುಂತೆ ನಾ ಕೊರಗಿ ಸೋತೆ ನಾ
ನಿನ್ನ ನೆನಪಲ್ಲೇ
ನಿನ್ನ ಗುಂಗಲ್ಲೇ
ನಿನ್ನ ನೆನಪಲ್ಲೇ
ನಿನ್ನ ಗುಂಗಲ್ಲೇ
ನಿನ್ನ ಗುಂಗಲ್ಲೇ