ನಿನ್ನ ಕಂಡು ಬೆರಗಾದೆನೆ – Ninna Kandu beragaadene Song Lyrics in Kannada – Prema Pallavi Kannada Movie

ಚಿತ್ರ: ಪ್ರೇಮ ಪಲ್ಲವಿ

…….
ಆಆಆ ಆಆ ಆಆಆ
ಆಆಆಆಆಆಆ

ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೆ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೆ
♫♫♫♫♫♫♫♫♫♫♫
ಬಳುಕುತ ನಡೆವಾಗ
ಸುಮಲತೆಯಂತೆ
ಕುಣಿಯಲು ನೀ ನವಿಲಂತೇ
ನುಡಿಯುವ ಮಾತೆಲ್ಲ
ಅರಗಿಣಿಯಂತೆ
ಹಾಡಲು ಕೋಗಿಲೆಯಂತೆ
ಕಣ್ಣಲಿ ಮಿಂಚೇನು
ತುಟಿಯಲಿ ಸವಿಜೇನು
ಕಣ್ಣಲಿ ಮಿಂಚೇನು
ತುಟಿಯಲಿ ಸವಿಜೇನು
ನಿನ್ನ ನೋಟ

ಶೃಂಗಾರದಾಟ
ನಿನ್ನ ನೋಟ ಶೃಂಗಾರದಾಟ
ಪ್ರಣಯದ ಹೊಸ ಕವಿತೆಯೆ
ನನಗೊಲಿಯುತ
ಹೆಣ್ಣಾಗಿ ಓಡೋಡಿ ಬಂದೇನು
ನಾ ಕಾಣೆನೆ
ನಿನ್ನ ಕಂಡು ಬೆರಗಾದೇನೆ
ಏಕೋ ಕಾಣೆ ಮರುಳಾದೇನೆ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೆ
♫♫♫♫♫♫♫♫♫♫♫
ಬಾಳಲಿ ಜೊತೆಯಾಗಿ
ಬರುವೆನು ನಾನು
ಚಿಂತೆಯ ನೀನು ಬಿಡು
ಕೇಳದೆ ನಿನಗೆಲ್ಲಾ
ತರುವೆನು ಇನ್ನೂ
ಮನಸ್ಸನು ಇಲ್ಲಿ ಕೊಡು
ಓಡುವ ನದಿಯೆರಡು
ಒಂದಾಗಿ ಬೆರೆವಂತೆ
ಓಡುವ ನದಿಯೆರಡು
ಒಂದಾಗಿ ಬೆರೆವಂತೆ
ನಾ ನಿನ್ನ ಸೇರಿ
ಎಂದೆಂದು ಇರುವೆ
ನಾ ನಿನ್ನ ಸೇರಿ ಎಂದೆಂದು ಇರುವೆ
ಹರುಷವ ಮನ ತುಂಬುವೆ
ಸುಖ ನೀಡುವೆ ಮಾತು ಸುಳ್ಳಲ್ಲ
ನಂಬೆನ್ನ ಬಾ ಚಿನ್ನ ಬಾ
ನಿನ್ನ ಕಂಡು ಬೆರಗಾದೆನೆ
ಏಕೋ ಕಾಣೆ ಮರುಳಾದೆನೆ
ಸ್ನೇಹದ ಕರೆಗೆ ಪ್ರೀತಿಯ ನುಡಿಗೆ
ಹೆಣ್ಣೆ ನನ್ನಾಣೆ ನಾ ಸೋತೆ
ನಿನ್ನ ಕಂಡು ಬೆರಗಾದೆನೆ
ಎಕೋ ಕಾಣೆ ಮರುಳಾದೆನೆ

Leave a Reply

Your email address will not be published. Required fields are marked *