ನಿನ್ನೆ ನೋಡೋ ಆಸೆ – Ninne nodo aase Song Lyrics in Kannada – Adrushtavantha Movie Lyrics

ಚಿತ್ರ : ಅದೃಷ್ಟವಂತ

ಗಾಯಕರು :ಎಸ್.ಪಿ.ಬಾಲಸುಬ್ರಹ್ಮಣ್ಯಂ
ಮತ್ತು ಎಸ್.ಜಾನಕಿ ಅಮ್ಮ
ಸಂಗೀತ : ಚಕ್ರವರ್ತಿ
ಸಾಹಿತ್ಯ : ಚಿ.
ಉದಯಶಂಕರ್


ನಿನ್ನೆ ನೋಡೋ ಆಸೆ
ಏನೋ ಹೇಳೋ ಆಸೆ
ನಿನ್ನೆ ನೋಡೋ ಆಸೆ
ಏನೋ ಹೇಳೋ ಆಸೆ
ಸವಿಮಾತನು ಆಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೆ ಸ್ನೇಹಕೆ ನೀಡಲೇ ಕಾಣಿಕೆ
ನಿನ್ನೆ ನೋಡೋ ಆಸೆ
ಏನೋ ಹೇಳೋ ಆಸೆ
♫♫♫♫♫♫♫♫♫♫♫♫♫♫

ನಯನವು ನೋಡಿದ ಮೊದಲನೆ ದೇವರು
ಗೆಳೆಯ ನೀನೆ ತಾನೇ
ಅರಿಯದೆ ಪ್ರೇಮವೂ ಅರಳಲು ಸೋತೆನು
ಏಕೋ ನಾನು ಕಾಣೆ
ಬಿಡಲಾರೆ ಇನ್ನು ನಿನ್ನ
ನನ್ನಾಣೆ ನೀನೇ ಪ್ರಾಣ
ಹೊಸ ಬಾಳಿನ ಪ್ರೀತಿಯ ಗೀತೆಯ
ಹಾಡುತ ಬಂದಿರುವೆ

ಸರಸದಿ ಸೇರಿ ಪ್ರಣಯವ ತೋರಿ
ಸುಖವನು ತಂದೆ ಚೆಲುವೆ ಬಾಳಿಗೆ
ನಿನ್ನೆ ನೋಡೋ ಆಸೆ
ಹುಂ ಹುಂ
ಏನೋ ಹೇಳೋ ಆಸೆ
ಆಹಾ
ಸವಿಮಾತನು ಹಾಡಲು ಏತಕೆ
ನಿನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೆ ಸ್ನೇಹಕೆ ನೀಡಲೇ ಕಾಣಿಕೆ
ಹುಂ ಹುಂ
♫♫♫♫♫♫♫♫♫♫♫♫♫♫

ಯಾರಿಗೂ ಬೇಡದ ನನ್ನಲಿ ಬಗೆ
ಪ್ರೀತಿ ನಿನಗೆ ಏಕೆ
ಯಾರಿಗೂ ಕಾಣದ ಚಿನ್ನದ ಮನಸನು
ಕಂಡು ನಾನು ಸೋತೆ
ಬಲು ಜಾಣೆ ಮಾತಿನಲ್ಲಿ
ಗುಣವಂತ ನಡತೆಯಲ್ಲಿ
ನೀ ನಡೆಯುವ ಹಾದಿಗೆ ಹೂಗಳ ಹಾಸಲು ಬಂದಿಹೆನು
ರಸಿಕನೆ ನಿನ್ನ ಸವಿನುಡಿ ಜೇನ
ಸವಿಯುತ ಸ್ವರ್ಗ ಇಲ್ಲೇ ಕಂಡೆನು
ನಿನ್ನೆ ನೋಡೋ ಆಸೆ

ಏನೋ ಹೇಳೋ ಆಸೆ
ಸವಿಮಾತನು ಹಾಡಲು ಏತಕೆ
ನನ್ನ ಕಣ್ಣಲಿ ತುಂಬಿದೆ ನಾಚಿಕೆ
ಚೆಲುವೆ ಸ್ನೇಹಕೆ
ನೀಡಲೇ ಕಾಣಿಕೆ

Leave a Reply

Your email address will not be published. Required fields are marked *