PK-Music
ಚಿತ್ರ: ಪರಸಂಗದ ಗೆಂಡೆತಿಮ್ಮ
ಹಾಡಿದವರು: ಎಸ್.ಜಾನಕಿ
ನಿನ್ನಾ ರೂಪು ಎದೆಯ ಕಲಕಿ
ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ
ಕಂಡೆ ಅನುರಾಗ
ಕಂಡೆ ಅನುರಾಗ
ಕಂಡೆ ಅನುರಾಗ
♫♫♫♫♫♫♫♫♫♫♫♫
ಮನಸಿನ ಚಿಲುಮೆಯಾಗೆ
ಮುಗಿಯದಾಸೆ ಚಿಮ್ಮೈತೆ
ಮನಸಿನ ಚಿಲುಮೆಯಾಗೆ
ಮುಗಿಯದಾಸೆ ಚಿಮ್ಮೈತೆ
ಹೃದಯದ ಕುಲುಮೆಯಾಗೆ
ನೂರು ಬಯಕೆ ಸಿಡಿದೈತೆ
ನಿನ್ನ ಕಾಣುವ ಭಾವ ಬೆಳೆದು
ನನ್ನ ಕನಸು ಕಡೆದೈತೆ
ನಿನ್ನಾ ರೂಪು ಎದೆಯ ಕಲಕಿ
ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ
ಕಂಡೆ ಅನುರಾಗ
♫♫♫♫♫♫♫♫♫♫♫♫
ತೆರೆಯದ ಬಯಕೆ ಬಾನು
ದೂರ ದೂರ ಸರಿದೈತೆ
ತೆರೆಯದ ಬಯಕೆ ಬಾನು
ದೂರ ದೂರ ಸರಿದೈತೆ
ಹರೆಯದ ಹಂಬಲ ಗಂಗೆ
ಬಾಗಿ ಬಳುಕಿ ಹರಿದೈತೆ
ನಿನ್ನ ಸ್ನೇಹಕೆ ಬಾಳು ನಲಿದು
ಆಸೆ ಗಂಧ ಹರಡೈತೆ
ನಿನ್ನಾ ರೂಪು ಎದೆಯ ಕಲಕಿ
ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ
ಕಂಡೆ ಅನುರಾಗ
♫♫♫♫♫♫♫♫♫♫♫♫
ಮರೆಯದ ಮೋಹ ಉಕ್ಕಿ
ತೇಲಿ ತೇಲಿ ಮೊರೆದೈತೆ
ಮರೆಯದ ಮೋಹ ಉಕ್ಕಿ
ತೇಲಿ ತೇಲಿ ಮೊರೆದೈತೆ
ಇಂಗದ ದಾಹ ಬೇಗೆ
ಕಾದೂ ಕಾದೂ ಕರೆದೈತೆ
ನಿನ್ನ ಸೇರುವ ರಾಗ ರಂಗಿಗೆ
ನನ್ನ ಮನಸು ತೆರೆದೈತೆ
ನಿನ್ನಾ ರೂಪು ಎದೆಯ ಕಲಕಿ
ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ
ಕಂಡೆ ಅನುರಾಗ
ಕಂಡೆ ಅನುರಾಗ
ಕಂಡೆ ಅನುರಾಗ