ನಿಜವ ನುಡಿಯಲೆ – Nijava Nudiyale Lyrics in Kannada – Raghavendra Rajkumar – Malashree


ಚಿತ್ರ: ನಂಜುಂಡಿ ಕಲ್ಯಾಣ

ಸಂಗೀತ: ಉಪೇಂದ್ರ ಕುಮಾರ್

ಸಾಹಿತ್ಯ: ಚಿ. ಉದಯಶಂಕರ್

 

ನಿಜವ ನುಡಿಯಲೆ ನನ್ನಾಣೆ ನಲ್ಲ

ಪ್ರೀತಿಯ ರಂಗು ಚೆಲ್ಲಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲ

ಪ್ರೀತಿಯ ರಂಗು ಚೆಲ್ಲಿದೆ

ಬಾನಿನ ರಂಗು ಭೂಮಿಯ ರಂಗು

ಏನನು ಹೇಳುತಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ


ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ಕೆನ್ನೆಯ ರಂಗು ತುಟಿಯ ರಂಗು

ಕಣ್ಣನು ಕಾಡುತಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ಓಓಓ ನಿಜವ ನುಡಿಯಲೆ

ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ

♫♫♫♫♫♫♫♫♫♫♫♫

ನಲ್ಲೆಯ ತೋಳಿನ ಸೆರೆ

ಸೇರುವ ಆಸೆಯಲಿರೆ

ನಲ್ಲನ ತೋಳಿನ ಸೆರೆ

ಸೇರುವ ಆಸೆಯಲಿರೆ

ಪ್ರೀತಿಯ ಜೇನಿನ

ತೊರೆ ವೇಗದಿ ಹರಿಯುತಲಿರೆ

ತನುವು ಅರಳಿ ಮನವು ಕೆರಳೀ

ವಿರಹದುರಿಗೆ ನರಳಿ ನರಳಿ

ಬಳಿಗೆ ಬಂದಿರುವೆ

ನಿಜವ ನುಡಿಯಲೆ ನನ್ನಾಣೆ ನಲ್ಲ

ಪ್ರೀತಿಯ ರಂಗು ಚೆಲ್ಲಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

♫♫♫♫♫♫♫♫♫♫♫♫

ಸಂಜೆಯು ಜಾರುತಲಿರೆ

ಗಾಳಿಯು ಬೀಸುತಲಿರೆ

ಸಂಜೆಯು ಜಾರುತಲಿರೆ

ಗಾಳಿಯು ಬೀಸುತಲಿರೆ

ನಲ್ಲೆಯ ಪ್ರೀತಿಸುತಿರೆ

ಸ್ವರ್ಗವ ಕಾಣುತಲಿರೆ

ಹಾಡುತಿರಲು ಪ್ರಣಯ ದುಂಬಿ

ಬಾಳ ತುಂಬ ಹರುಷ ತುಂಬಿ

ನಾನು ನಲಿದಿರುವೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ನಿಜವ ನುಡಿಯಲೆ ನನ್ನಾಣೆ

ನಲ್ಲ ಪ್ರೀತಿಯ ರಂಗು ಚೆಲ್ಲಿದೆ

ಕೆನ್ನೆಯ ರಂಗು ತುಟಿಯ

ರಂಗು ಕಣ್ಣನು ಕಾಡುತಿದೆ

ನಿಜವ ನುಡಿಯಲೆ ನನ್ನಾಣೆ ನಲ್ಲೆ

ಪ್ರೀತಿಯ ರಂಗು ಚೆಲ್ಲಿದೆ

ನಿಜವ ನುಡಿಯಲೆ ನನ್ನಾಣೆ

ನಲ್ಲ ಪ್ರೀತಿಯ ರಂಗು ಚೆಲ್ಲಿದೆ



Nijava Nudiyale Nannane nalle Lyrics

Leave a Reply

Your email address will not be published. Required fields are marked *