ಭಾವಗೀತೆ
ಹಾಡು: ನಿಂದೆಯೊಳು
ಮಿಂದು
ಸಂಗೀತ: ರಾಘವೇಂದ್ರ
ಬೀಜಾಡಿ
ಸಾಹಿತ್ಯ:
ಮಧು ಕೋಡನಾಡು
ನಿಂದೆಯೊಳು
ಮಿಂದು
ಚಂದವಾಯಿತು
ಬದುಕು
ಬೆಂದ ಮಡಕೆಯ
ಹಾಗೆ ಗಟ್ಟಿಗೊಂಡು
ನಿಂದೆಯೊಳು
ಮಿಂದು
ಚಂದವಾಯಿತು
ಬದುಕು
ಬೆಂದ ಮಡಕೆಯ
ಹಾಗೆ ಗಟ್ಟಿಗೊಂಡು
ಹಿಂದೆ ತೆಗಳಿದರೇನು
ಮುಂದೆ ಹೊಗಳಿದರೇನು
ಹಿಂದೆ ತೆಗಳಿದರೇನು
ಮುಂದೆ ಹೊಗಳಿದರೇನು
ಮಂದಹಾಸದಿ
ನಗುವೇ
ಎಲ್ಲ ಉಂಡು
ನಿಂದೆಯೊಳು
ಮಿಂದು
ಚಂದವಾಯಿತು
ಬದುಕು
ಬೆಂದ ಮಡಕೆಯ
ಹಾಗೆ ಗಟ್ಟಿಗೊಂಡು
♫♫♫♫♫♫♫♫♫♫♫♫
ಬಿಸಿಲು ಮಳೆ
ಗಾಳಿಗೆ
ಹಸಿರು ಮರ
ಕುಸಿಯುವುದೇ
ಬಿಸಿಲೊಡೆದು
ಬೆಳೆಯುವುದು
ಬಸಿರಿನಿಂದ…
ಮಸಣದೊಳಗಿದ್ದರೂ
ವ್ಯಸನಗೊಳ್ಳದು
ಕುಸುಮ
ಅರಳುವುದು
ನಸು ನಗುತ
ಒನಪಿನಿಂದ…
ಉಳಿಯ ಪೆಟ್ಟನು
ತಿಂದ
ಶಿಲೆಯು ತಾ
ಕೊರಗುವುದೇ
ಉಳಿಯ ಪೆಟ್ಟನು
ತಿಂದ
ಶಿಲೆಯು ತಾ
ಕೊರಗುವುದೇ
ಕಡೆದಷ್ಟು
ಅರಳುವುದು ಶಿಲ್ಪವಾಗಿ
ಕಡೆವ ಶಿಲ್ಪಿಯು
ಅವನು
ನಾನೊಂದು
ಬರಿಯ ಶಿಲೆ
ಅವನ ಕೈಯ್ಯೊಳಗಿರುವೆ
ಮೂರ್ತಿಯಾಗಿ
ನಿಂದೆಯೊಳು
ಮಿಂದು
ಚಂದವಾಯಿತು
ಬದುಕು
ಬೆಂದ ಮಡಕೆಯ
ಹಾಗೆ ಗಟ್ಟಿಗೊಂಡು
♫♫♫♫♫♫♫♫♫♫♫♫
ಉಕ್ಕಿ ಮೊರೆಯುವ
ಅಲೆಯು
ಸೊಕ್ಕೆದ್ದು
ಅಪ್ಪಳಿಸೆ
ಮರಳ ತೀರವು
ನರಳಿ
ಅಳುವುದೇನು…
ದಿಕ್ಕು ದಿಕ್ಕುಗಳಲ್ಲೂ
ದುಃಖದಡವಿಯೇ
ಇರಲಿ
ಬಿಕ್ಕಳಿಸಿ
ಕೂಡೆನು ಎಂದು ನಾನು
ರಸಭರಿತ ಬಾಳಿನಲಿ
ಸರಸ ವಿರಸಗಳೆರಡು
ರಸಭರಿತ ಬಾಳಿನಲಿ
ಸರಸ ವಿರಸಗಳೆರಡು
ಸಮರಸದಿ ಬೆರೆತಿರಲು
ಎಷ್ಟು ಚಂದಾ…
ಹಸಿ ಹಸಿಯ
ಪದಗಳಿಗೆ
ಹೊಸ ಭಾವ
ಲೇಪಿಸುತ
ಹಾಡು ಹೊಮ್ಮುವ
ಹಾಗೆ
ಕವಿತೆಯಿಂದ…
ನಿಂದೆಯೊಳು
ಮಿಂದು
ಚಂದವಾಯಿತು
ಬದುಕು
ಬೆಂದ ಮಡಕೆಯ
ಹಾಗೆ ಗಟ್ಟಿಗೊಂಡು
ನಿಂದೆಯೊಳು
ಮಿಂದು
ಚಂದವಾಯಿತು
ಬದುಕು
ಬೆಂದ ಮಡಕೆಯ
ಹಾಗೆ ಗಟ್ಟಿಗೊಂಡು
