ನಮ್ಮಮ್ಮ ಶಾರದೆ – Nammamma Sharade Song Lyrics in Kannada – Kanakadaasaru

ರಚನೆ:ಕನಕದಾಸರು


ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಕಮ್ಮಗೋಲನ ವೈರಿ

ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ ಕಣಮ್ಮ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ

♫♫♫♫♫♫♫♫♫♫♫♫
ಮೋರೆ ಕಪ್ಪಿನ ಭಾವ ಮೊರದಗಲದ
ಕಿವಿ ಕೋರೆದಾಡೆಯನಾರಮ್ಮಾ
ಮೋರೆ ಕಪ್ಪಿನ ಭಾವ ಮೊರದಗಲದ
ಕಿವಿ ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ

ಮುರಿದಿಟ್ಟ ಚಂದ್ರನ
ಅ ಅ ಆಹ ಅಹ
ಮೂರುಕಣ್ಣನ ಸುತ ಮುರಿದಿಟ್ಟ
ಚಂದ್ರನ ಧೀರ ತಾ

ಗಣನಾಥನೇ ಕಣಮ್ಮ..
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
♫♫♫♫♫♫♫♫♫♫♫♫
ಉಟ್ಟದಟ್ಟಿಯು ಬಿಗಿದುಟ್ಟ
ಚೆಲ್ಲಣದ ದಿಟ್ಟ ತಾನಿವನಾರಮ್ಮ
ಉಟ್ಟದಟ್ಟಿಯು ಬಿಗಿದುಟ್ಟ
ಚೆಲ್ಲಣದ ದಿಟ್ಟ ತಾನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು

ಆ ಅ ಅ..ಆಹ ಅಹ ಅಹ
ಪಟ್ಟದ ರಾಣಿ ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೇ ಕಣಮ್ಮ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
♫♫♫♫♫♫♫♫♫♫♫♫

ರಾಶಿ ವಿದ್ಯೆಯ ಬಲ್ಲ

ರಮಣಿ ಹಂಬಲನೊಲ್ಲ

ಭಾಷಿಗನಿವನಾರಮ್ಮ
ರಾಶಿ ವಿದ್ಯೆಯ ಬಲ್ಲ

ರಮಣಿ ಹಂಬಲನೊಲ್ಲ

ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿ
ಆ ಅ ಅ.. ಆಹ ಅಹ ಅಹ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿ

ಕೇಶವ ದಾಸ
ಕಣೇ ನಮ್ಮಮ್ಮ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ ಕಣಮ್ಮ..
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ

Leave a Reply

Your email address will not be published. Required fields are marked *