ನನ್ನ ಚಂಚಲೇ – Nanna Chanchale Song Lyrics in Kannada – Snehana Preethina Kannada Movie

ಚಿತ್ರ: ಸ್ನೇಹಾನಾ ಪ್ರೀತೀನಾ

ಸಂಗೀತ: ವಿ. ಹರಿಕೃಷ್ಣ

ಸಾಹಿತ್ಯ: ನಾಗೇಂದ್ರ ಪ್ರಸಾದ್

ಗಾಯನ: SP ಬಾಲು, ಶ್ರೇಯಾ ಘೋಶಾಲ್

 

ನನ್ನ ಚಂಚಲೇ
ಕರಿತಾಳೆ ಕಣ್ಣಲೇ
ಕಣ್ಣ ಅಂಚಲೇ
ಕುಶಲಾನಾ ಅಂತಾಳೆ
ಓ ಮರಿಬೇಡ ಪ್ರೀತಿನ
ಕಾಯ ಬೇಕು ಜೋಪಾನ
ಯಾರೇ ಏನೇ ಅಂದ್ರು

ಪ್ರೀತಿ ಮಾಡುವೆ…..
ಪ್ರೀತಿ ಜಾತಕಾನ ತಿದ್ದಿ ನೋಡುವೆ
ನನ್ನ ಚಂಚಲೇ
ಕರಿತಾಳೆ ಕಣ್ಣಲೇ
ಕಣ್ಣ ಅಂಚಲೇ
ಕುಶಲಾನಾ ಅಂತಾಳೆ
♫♫♫♫♫♫♫♫♫♫♫♫

ಬೀಗ ಹಾಕಿ ಇತ್ತು ಹೃದಯ
ಹೇಗೆ ಒಳಗೆ ಬಂದೆ ಗೆಳೆಯ
ಜಾದೂಗರಾನಾ
ಜಾದೂಗಾರಾನ
ಗಂಡು : ಅಯ್ಯೋ ರಾಮಾ ಗೊತ್ತೇಇಲ್ಲ
ಅರಳು ಮರುಳು ಆಗೋಯ್ತಲ್ಲ
ಜಾದೂ ನನದಲ್ಲ
ಜಾದೂ ನನದಲ್ಲ
ನಾನು
ಅಪ್ಪಟ ಅಪರಂಜಿ
ನೀನು
ಪ್ರೀತಿಗೆ ಕೊರವಂಜಿ
ಪ್ರೀತಿ
ಲೋಕದ ಎದುರು ಮಾಡೋ ಹೋರಾಟ
ಯಾರೇ ಏನೇ ಅಂದ್ರು ಪ್ರೀತಿ ಮಾಡುವೆ
ಪ್ರೀತಿ ಜಾತಕಾನ ತಿದ್ದಿ ನೋಡುವೆ
ನನ್ನ ಚಂಚಲೇ
ಕರಿತಾಳೆ ಕಣ್ಣಲೇ
ಕಣ್ಣ ಅಂಚಲೇ
ಕುಶಾಲಾನಾ ಅಂತಾಳೆ
♫♫♫♫♫♫♫♫♫♫♫♫

ಪ್ರೀತಿಮಾಡೋ
ಹುಡುಗರೆಲ್ಲ

ಮುತ್ತಿಗಾಗಿ ಕಾಯ್ತರಲ್ಲ
ಯಾಕೆ ನೀ ಹೇಳು
ಯಾಕೆ ನೀ ಹೇಳು
ಮೊದಲ ಮುತ್ತು ಜೇನು ಕೂಸೆ
ಜೇನಿಗಾಗಿ ಹುಡುಗರ ಆಸೆ
ತಪ್ಪಾ ನೀ ಹೇಳು
ತಪ್ಪೇನೆ ಹೇಳು
ಚಪಲ
ಪ್ರೀತಿಗೆ ಆ ಹೆಸರಾ
ಪ್ರೀತಿ
ಧಮನಿಗೆ ಆಧಾರ
ಧಮನಿ
ನಿನ್ನನೆ ಧ್ಯಾನಮಾಡೋ ದಾಸ ಕಣೆ
ಯಾವ ಮೋಡಿಗಾರ ಪ್ರೀತಿ ಮಾಡಿದ
ಮೆಚ್ಚಿ ಬರೆಯಬೇಕು ಒಂದು ಕಾಗದ
ನನ್ನ ಚಂಚಲೆ
ಕರಿತಾಳೆ ಕಣ್ಣಲೆ
ಕಣ್ಣ ಅಂಚಲೆ
ಕುಶಲಾನಾ ಅಂತಾಳೆ
ಹುಂ…ಹ್ಮ್..ಹ್ಮ್..ಹ್ಮ್
ಹ್ಮ್..ಹ್ಮ್
ಆಹಾ…ಹಾ…ಹಾ
ಹಾ.ಹಾ.ಹಾ
ಯಾವ ಮೋಡಿಗಾರ ಪ್ರೀತಿ ಮಾಡಿದ
ಮೆಚ್ಚಿ ಬರೆಯಬೇಕು ಒಂದು ಕಾಗದ

Leave a Reply

Your email address will not be published. Required fields are marked *